ಬೆಂಗಳೂರು –
ಅಂಚೆಯಣ್ಣನ ಪಠ್ಯದಲ್ಲಿ ರಾಜ್ಯದ ಯಾವುದೇ ಪಠ್ಯ ಪುಸ್ತಕದಲ್ಲೂ ಮಲಯಾಳಂ ನಟನ ಪೋಟೋ ವನ್ನು ಬಳಕೆ ಮಾಡಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಪತ್ರಿಕೆಗಳಲ್ಲಿ ಪ್ರಕಟವಾದಂತ ಸುದ್ದಿ ಸತ್ಯಕ್ಕೆ ದೂರವಾಗಿದೆ ಎನ್ನುತ್ತಾ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟ ಪಡಿಸಿದರು

ಅಂಚೆಯಣ್ಣನ ಚಿತ್ರಕ್ಕೆ ಮಲಯಾಳಂ ನಟನ ಪೋಟೋ ಎಂಬ ಶೀರ್ಷಿಕೆಯಡಿ ಕುಂಚಾಕೋ ಬಾಬನ್ ರವರ ಚಿತ್ರವನ್ನು ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಅಂಚೆ ಪೇದೆ ಪಠ್ಯಪುಸ್ತಕದಲ್ಲಿ ಪ್ರಕಟಿಸಿರೋದಾಗಿ ಹೇಳಲಾಗಿತ್ತು.


ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೇ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಸವಾಲ್ ಹಾಕಿದ್ದರು.ಪ್ರಕಟಿತವಾದ ವರದಿ ಗಳನ್ನು ಪರಿಶೀಲಿಸಲಾಗಿದೆ.ಕರ್ನಾಟಕ ಪಠ್ಯಕ್ರಮದ 1 ರಿಂದ 10ನೇ ತರಗತಿಯವರೆಗಿನ ಯಾವುದೇ ತರಗತಿಯ ಯಾವುದೇ ವಿಷಯದ ಪಠ್ಯಪುಸ್ತಕ ಸಂಘದಿಂದ ಮುದ್ರಿತ ವಾಗಿರುವ ಪಠ್ಯಪುಸ್ತಕದಲ್ಲಿಯೂ ಈ ಚಿತ್ರ ಇರೋದಿಲ್ಲ ಎಂದರು