ಧಾರವಾಡ –
ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಜಿ.ಪಿ.ಟಿಗೆ ವಿಲೀನ ಮಾಡುವುದಾಗಿ ಶಿಕ್ಷಣ ಸಚಿವರು ಹೇಳಿದ್ದು ಇದರಿಂದ ನಮ್ಮ ಮೊದಲ ಹಂತದ ಗೆಲುವು ಎಂದು ಕರ್ನಾಟಕ ರಾಜ್ಯ ಸರಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ವಿಜಯಪುರ ಹೇಳಿದ್ದು ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಪದವೀಧರರಿಗೆ ಪರೀಕ್ಷೆ ಇಲ್ಲದೆ ಜಿ.ಪಿ.ಟಿಗೆ ವಿಲೀನ ಮಾಡಲು ಒಪ್ಪಿಕೊಂಡಿದ್ದು ಸಂತೋಷದ ಸಂಗತಿ ಯಾಗಿದೆ ಹಾಗೆ ಇದು ನಮ್ಮ ಮೊದಲ ಜಯ ಅಂತ ಹೇಳಬಹುದು ಈ ಒಂದು ಮಹತ್ವದ C&R ನಿಯಮದ ಶಿಕ್ಷಕ ಸ್ನೇಹಿ ತಿದ್ದುಪಡಿಗೆ ಒತ್ತಾಯಿಸಿದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘಕ್ಕೆ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘಕ್ಕೆ ಹಾಗೂ ಪದವೀಧರ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಎಸ್ ವಾಯ್ ಸೊರಟಿ ಪ್ರಧಾನ ಕಾರ್ಯದರ್ಶಿಗಳಾದ ಶಶಿಕುಮಾರ ಬೆಳಗಾವಿ ವಿಭಾಗ ಕಾರ್ಯದರ್ಶಿಯಾದ ಸೋಮಲಿಂಗ ಹಿರೇಮಠ ಹಾಗೂ ಜಿಲ್ಲಾ ತಾಲೂಕು ಅಧ್ಯಕ್ಷರಿಗೂ ಪ್ರಧಾನ ಕಾರ್ಯದರ್ಶಿ ಗಳಿಗೂ ಎಲ್ಲ ಪದಾಧಿಕಾರಿಗಳಿಗೂ ಅನಂತ ಧನ್ಯವಾದಗಳನ್ನು ಹೇಳಿದ್ದಾರೆ

ಸುರೇಶ ಶೇಡಿಶ್ಯಾಳ ರಾಜ್ಯ ಕೊಶಾಧ್ಯಕ್ಷರು KSPSTA ಇವರು ಕೇವಲ ಕೆಲವು ದಿನಗಳಲ್ಲಿ ನಮ್ಮಲ್ಲರಿಗೂ ಅನುಕೂಲ ವಾಗುವಂತೆ C & R ನಿಯಮ ತಿದ್ದುಪಡಿ ಆಗುತ್ತದೆ ಎಂದು ಹೇಳಿದ್ದಾರೆ.ಆದಷ್ಟು ಬೇಗನೆ ಶಿಕ್ಷಕ ಸ್ನೇಹಿ C & R ನಿಯಮ ಜಾರಿಯಾಗಲಿ ಆಗ ಎಲ್ಲರೂ ಪಟ್ಟ ಶ್ರಮಕ್ಕ ಜಯ ಸಿಕ್ಕಂತಾಗುತ್ತದೆ ಎಂದಿದ್ದಾರೆ.ಗೌರವ ಅಧ್ಯಕ್ಷರು ಉಮೇಶ ಕೌಲಗಿ,ಜಿಲ್ಲಾ ಅಧ್ಯಕ್ಷರಾದ ಈರಣ್ಣ ಹೊಸಟ್ಟಿ,ಪ್ರಧಾನ ಕಾರ್ಯದರ್ಶಿ ಗಳಾದ ಬಾಳಾಸಾಹೇಬ ಜಟ್ರಗೋಳ ಮತ್ತು ಸರ್ವ ಸದಸ್ಯರು ಈ ಒಂದು ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ ನಾಯಕರಿಗೆ ಮತ್ತು ಶಿಕ್ಷಣ ಸಚಿವ ರಿಗೆ ಅನಂತ ಅನಂತ ಧನ್ಯವಾದಗಳನ್ನು ಹೇಳಿದ್ದಾರೆ