ಬೆಂಗಳೂರು –
ಹೌದು ಯಾರಿಗೂ ಯಾವ ಇಲಾಖೆಗೂ ಇಲ್ಲದ ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ಕಳೆದ ಹಲವಾರು ವರ್ಷಗ ಳಿಂದ ನೆನೆಗುದಿಗೆ ಬಿದ್ದಿರುವ ಮತ್ತು ತುಂಬಾ ನಿರೀಕ್ಷೆ ಮಾಡುತ್ತಿರುವ ಸ್ವಂತ ಜಿಲ್ಲೆಗೆ ವರ್ಗಾವಣೆಗೆ ಸಿಹಿ ಸುದ್ದಿ ಯೊಂದು ಸಿಗುತ್ತಿದೆ.ಹೌದು ಹತ್ತು ಹದಿನೈದು ವರ್ಷಗಳಿಂ ದ ವರ್ಗಾವಣೆಗಾಗಿ ಕಾಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಒಂದು ಬಾರಿಗೆ ಸೀಮಿತವಾಗಿ ಅವರ ಸ್ವಂತ ಜಿಲ್ಲೆಗೆ ವರ್ಗಾಯಿಸಿ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು ಶಿಕ್ಷಣ ಇಲಾಖೆ ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡುವ ಕುರಿತು ಕ್ರಮ ಕೈಗೊಳ್ಳ ಲಾಗುತ್ತಿದೆ.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಇದೇ ವೇಳೆ ಒಂದು ಬಾರಿಗೆ ಅನ್ವಯ ವಾಗುವಂತೆ ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂಬ ಬೇಡಿಕೆ ಇದ್ದು ಇದನ್ನು ಪರಿಗಣಿಸಿರುವ ಶಿಕ್ಷಣ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳಲು ಸಿದ್ದತೆ ಮಾಡಿಕೊಂಡಿದ್ದು ಶೀಘ್ರದಲ್ಲೇ ಚಾಲನೆ ದೊರೆಯಲಿದೆ.ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಇದ್ದು, ಒಂದು ಬಾರಿಗೆ ಅನ್ವಯವಾಗು ವಂತೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಕಾನೂನಿಗೆ ತಿದ್ದುಪಡಿ ಮಾಡಬೇಕಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕತೊಡಗಿ ದ್ದಾರೆ
ತಮ್ಮ ಜಿಲ್ಲೆಗಳಿಗೆ ಹೋಗಲು ಪ್ರಾಥಮಿಕ ಶಾಲೆಗಳ 2702 ಶಿಕ್ಷಕಿಯರು, 3484 ಶಿಕ್ಷಕರು ಬಯಸಿದ್ದಾರೆ. ಅದೇ ರೀತಿ ಪ್ರೌಢಶಾಲೆಗಳ 1940 ಶಿಕ್ಷಕರು, 964 ಶಿಕ್ಷಕರು ತವರು ಜಿಲ್ಲೆಗೆ ಹೋಗಲು ಬಯಸಿದ್ದಾರೆ. ಇನ್ನೂ ಅನೇಕರು ತವರು ಜಿಲ್ಲೆಗೆ ಹೋಗುವ ನಿರೀಕ್ಷೆಯಲ್ಲಿದ್ದು ಶೀಘ್ರದಲ್ಲೇ ಈ ಕುರಿತಂತೆ ಸಮಗ್ರವಾದ ಪ್ಲಾನ್ ಸಿದ್ದಗೊಂಡು ಚಾಲನೆ ಸಿಗಲಿದೆ..