ಬೆಂಗಳೂರು –
ಬೇಸಿಗೆಯ ರಜೆಯ ವಿಚಾರದಲ್ಲಿ ರಾಜ್ಯದ ಶಿಕ್ಷಕರಲ್ಲಿ ಶಿಕ್ಷಣ ಸಚಿವರ ಮನವಿ ಮಾಡಿಕೊಂಡಿದ್ದಾರೆ ಹೌದು ಶಿಕ್ಷಕರೇ ಅಸಮಾಧಾನ ಗೊಳ್ಳಬೇಡಿ ಎನ್ನುತ್ತಾ ಶಿಕ್ಷಕರಿಗೆ ನೀಡುತ್ತಿದ್ದ ಬೇಸಿಗೆ ರಜೆಯಲ್ಲಿ ಈ ವರ್ಷ ಕಡಿತ ಮಾಡಲಾಗಿದ್ದು ಈ ಕುರಿತು ಶಿಕ್ಷಕರು ಬೇಸರಗೊಳ್ಳಬೇಡಿ ಮನವಿ ಮಾಡಿದ್ದಾರೆ ನಗರದಲ್ಲಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಉದ್ಘಾಟಿಸಿದ ನಂತ್ರ ಮಾತನಾಡಿದ ಸಚಿವರು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ಕೊಡುಗೆ ನೀಡಬೇಕು.ಇನ್ನು ಈ ವರ್ಷ ಬೇಸಿಗೆ ರಜೆಯನ್ನ ಎರಡು ವಾರಗಳು ಕಡಿಮೆ ಮಾಡಲಾ ಗಿದೆ ಮತ್ತು ಅದರ ಬಗ್ಗೆ ಅಸಮಾಧಾನಗೊಳ್ಳದಂತೆ ನಾನು ಶಿಕ್ಷಕರನ್ನು ವಿನಂತಿಸುತ್ತೇನೆ ಎಂದರು.
ಇನ್ನು ಈ ವೇಳೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿ ಗಳೊಂದಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಚಿವರು ವಿನಂತಿಸಿದರು. ಸುಮಾರು ಎರಡು ವರ್ಷಗಳ ನಂತ್ರ ಮಂಡಳಿಯ ಪರೀಕ್ಷೆ ಗಳನ್ನ ಸರಿಯಾಗಿ ನಡೆಸಲಾಗುತ್ತಿದೆ ಮತ್ತು ನಾವೆಲ್ಲರೂ ವಿದ್ಯಾರ್ಥಿಗಳಿಗೆ ಬೆಂಬಲ ವ್ಯವಸ್ಥೆಯಾಗಿರಬೇಕು ಎಂದು ಹೇಳಿದರು.