This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಸೇವಾ ನಿವೃತ್ತಿ ಹೊಂದಿದ ಮೊಹಮ್ಮದ್‌ ಹನೀಫ ಇ ಮುನವಳ್ಳಿ ಅವರಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಹುಬ್ಬಳ್ಳಿಯ ವತಿಯಿಂದ ಸತ್ಕಾರ ಗೌರವಿಸಿ ಸನ್ಮಾನ…..

WhatsApp Group Join Now
Telegram Group Join Now

ಬೆಳಗಾವಿ –

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾದ್ಯಕ್ಷರಾಗಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಮೂಲತ ಬೈಲಹೊಂ ಗಲ ತಾಲೂಕಿನ ಹುಣಸಿಕಟ್ಟಿ ಗ್ರಾಮದವರು,ರೈತ ಕುಟುಂ ಬದ ಇವರು ಬಡತನದಲ್ಲಿ ಪ್ರಾಥಮಿಕ, ಮತ್ತು ಪ್ರೌಢ ಶಿಕ್ಷಣ ಪಡೆದು ಶಿಕ್ಷಕರ ತರಬೇತಿ ಪಡೆದು1993ರಲ್ಲಿ ಶಿಕ್ಷಕ ವೃತ್ತಿಯನ್ನು ಖಾನಾಪೂರ ತಾಲೂಕಿನ MLPS ಚಿಕಲೆ ಗ್ರಾಮದಲ್ಲಿ ವೃತ್ತಿಯನ್ನು ಆರಂಭಿಸಿದ ಇವರು KLPS ಬಸವನಗರ ಕೊಡಚವಾಡ MLPS ಅಲ್ಲೊಳ್ಳಿ, ಕೊನೆ ಯಲ್ಲಿ HPS ಲಕ್ಕೆಬೈಲ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಿವೃತ್ತಿಯನ್ನು ಹೊಂದಿರುವ ಇವರಿಗೆ ಪಾರಿ ಶ್ವಾಡ ಗ್ರಾಮದ ಸಭಾಭವನದಲ್ಲಿ ಗೆಳೆಯರ ಬಳಗ ಹಮ್ಮಿ ಕೊಂಡ ಕಾರ್ಯಕ್ರಮದಲ್ಲಿ ದಂಪತಿಗಳ ಸಮೇತ ಸತ್ಕರಿಸಿ ಶುಭ ಕೋರಲಾಯಿತು.

ಇವರು ಎರಡು ಸಲ ಶಿಕ್ಷಕ ಸಂಘದ ಚುನಾಯಿತ ಡೈರೆಕ್ಟರ್ ಆಗಿ ಖಾನಾಪೂರ ತಾಲೂಕಿನ ಶಿಕ್ಷಕರ ಸೊಸೈಟಿಯ ನಿರ್ದೇಶಕರಾಗಿ ಇವರು ಸೇವೆಯನ್ನು ಸಲ್ಲಿಸಿರುತ್ತಾರೆ, ತಾವೊಬ್ಬ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರೂ ಸಹ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಇವರು ಎಲ್ಲಾ ಜನಾಂಗದ ಪ್ರೀತಿಯ ಶಿಕ್ಷಕರಾಗಿ, ಜಿಲ್ಲೆ ಮತ್ತು ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸದಾ ಪರಿಹರಿಸುತ್ತಿರುವ ಇವರು ಇವರೂ ಒಬ್ಬ ಒಳ್ಳೆಯ ಸಾಹಿತಿ, ಬಲವಿಲ್ಲದ ಬಡವ, ತಾಯಿಯ ಕರುಣೆ, ಅಕ್ಷರದೀಪ, ಮೂರು ನಾಟಕಗಳನ್ನು ಇವರು ರಚನೆ ಮಾಡಿದ್ದಾರೆ, ಬಡವರ ಪರ ಕಾಳಜಿ ಇವರದು ಎಂ ಐ ಮುನವಳ್ಳಿ ಅವರ ನಿವೃತ್ತ ಜೀವನ ಸುಖ ಮಯವಾಗಿರಲಿ ಗ್ರಾಮೀಣ ಶಿಕ್ಷಕರ ನೋವು ನಲಿವುಗಳಿಗೆ ಇವರು ನಿವೃತ್ತಿ ನಂತರ ಸ್ಪಂದಿಸಲಿ ಇವರು ಸಾಮಾಜಿಕ ಸೇವೆಯನ್ನು ಮುಂದುವರೆಸಲಿ ಎಂದು ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಇದೇ ಸಂದರ್ಭದಲ್ಲಿ ಮಾತನಾಡಿದರು ಮುನವಳ್ಳಿ ಅವರು ಇನ್ನೂ ಮುಂದೆ ಸರ್ವಸ್ವತಂತ್ರರು ಅವರ ನಿವೃತ್ತಿ ಜೀವನದಲ್ಲಿ ಶಿಕ್ಷಕರ ಪರವಾಗಿ ಹಾಗೂ ಬಡವರ ಪರವಾಗಿ ಕಾರ್ಯ ಮಾಡಲಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ, ಇವರು ಶ್ರಮಿಸಲಿ ಎಂದು ಸರಕಾರಿ ನೌಕರರ ಸಂಘದ ತಾಲೂಕು ಅದ್ಯಕ್ಷರಾದ ಬಿ ಎಂ ಯಳ್ಳೂರ ಮಾತನಾಡಿದರು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅದ್ಯಕ್ಷರಾದ ಶ್ರೀ ಶ್ರೀಧರ ಗಣಾಚಾರಿ ಇವರು ಅಧ್ಯಕ್ಷತೆ ಯಲ್ಲಿ ಜರುಗಿದ ಈ ಸಮಾರಂಭದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ,ರಾಜ್ಯ ಕೋಶಾ ದ್ಯಕ್ಷರು ಬಿ ವಿ ಅಂಗಡಿ ರಾಜ್ಯ ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ವಿಭಾಗೀಯ ಸಂಚಾಲಕರು ಅಕ್ಬರಲಿ ಸೋಲಾಪುರ,ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅದ್ಯಕ್ಷರಾದ ಸುರೇಶ ಸಕ್ರೆಣ್ಣವರ,ತಾಲೂಕು ಎನ್ ಎಸ್ ನೇಗಿನಾಳ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಹೇಮಾ ಹುಕ್ಕೇರಿ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರದಾನ ಕಾರ್ಯ ದರ್ಶಿ ಸುನೀಲ ಏಗನಗೌಡರ,ಸವದತ್ತಿ ತಾಲೂಕು ಅದ್ಯಕ್ಷ ರಾದ ಎಸ್ ಜಿ ಗೂಳಪ್ಪನವರ, ಸವದತ್ತಿ ತಾಲೂಕಿನ ನೌಕರರ ಸಂಘದ ಸಹಕಾರ್ಯದರ್ಶಿ ಮಹಾಂತೇಶ ಮುಂಡರಗಿ,ಸವದತ್ತಿ ತಾಲೂಕು ಗ್ರಾ.ಪ್ರಾ ಶಾ ಶಿ ಸಂಘದ ಖಜಾಂಚಿ ಆರ್ ಎಂ ಕುಡಚಿ, ಸಿ ಆರ್ ಪಿ ಯವರಾದ ಎನ್ ಬಿ ಪೆಂಟೇದ, ಜಯಶ್ರೀ ಮುರಗೋಡ, ಕೆ ಎಸ್ ಸುಬ್ಬಾನಿ, ಮುಂತಾದವರು ಇದ್ದರು, ಎಂ ಆಯ್ ಮುನವಳ್ಳಿ ಅವರ ಧರ್ಮ ಪತ್ನಿ ಪಾರಿಶ್ವಾಡ ಗ್ರಾಮ ಪಂಚಾಯತಿ ಅದ್ಯಕ್ಷರಾದ ಗುಲ್ ಶಾನ್ ಎಂ ಮುನವಳ್ಳಿ ಇವರಿಗೂ ಇದೆ ಸಂದರ್ಭ ದಲ್ಲಿ ಸತ್ಕರಿಸಲಾಯಿತು.ಅರವಿಂದ ಮಕಾಟೆ ನಿರೂಪಿಸಿ ದರು, ಗುರುಸಿದ್ದಯ್ಯ ಕಲ್ಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಅರವಿಂದ ಮಕಾಟೆ ವಂದಿಸಿದರು ‌


Google News

 

 

WhatsApp Group Join Now
Telegram Group Join Now
Suddi Sante Desk