ಉಡುಪಿ –
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ವಿತರಿಸುವ ಸಮವಸ್ತ್ರದಲ್ಲಿ ಬಹು ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಲೇ ರಾಜೀನಾಮೆ ನೀಡಬೇಕೆಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿಯಿಂದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸ ಲಾಯಿತು.ರಾಜ್ಯ ಸರ್ಕಾರ ಕಮಿಷನ್ ದಂಧೆಯಲ್ಲಿ ನಿರತ ವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜತೆಯಲ್ಲಿ ಚೆಲ್ಲಾಟವಾ ಡುತ್ತಿದೆ.ಕೂಡಲೇ ನೈತಿಕ ಹೊಣೆಹೊತ್ತು ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
2019ರಲ್ಲಿ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಆರ್‌ಟಿಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ ಸರ್ಕಾರ ಹೊಲಿದ ಸಮವಸ್ತ್ರ ನೀಡಬೇಕು ಎಂದು ಸೂಚಿಸಿತ್ತು. ಎಸ್‌ಡಿಎಂಸಿ ಮೂಲಕ ₹ 230ಕ್ಕೆ ಹೊಲಿದ ಎರಡು ಜೊತೆ ಸಮವಸ್ತ್ರ ಜೊತೆಗೆ ಶೂ,ಸಾಕ್ಸ್,ಟೈ ವಿತರಣೆ ಮಾಡಲಾ ಗಿತ್ತು.ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉದ್ಯೋಗ ಸಿಕ್ಕಿತ್ತು.ಇದೀಗ ಸರ್ಕಾರ ಎಸ್‌ಡಿಎಂಸಿಯನ್ನು ಕಡೆಗಣಿಸಿ ಕಮಿಷನ್ ವ್ಯಾವೋಹದಿಂದ ಮಹಾರಾಷ್ಟ್ರ ಮೂಲದ ಕಂಪೆನಿಗೆ ಟೆಂಡರ್ ನೀಡಿದ್ದು ₹ 250ಕ್ಕೆ ಹೊಲಿಯದ ಬಟ್ಟೆಗಳನ್ನು ನೀಡಲು ಮುಂದಾಗಿದೆ.ಈ ಮೂಲಕ ಬಹು ಕೋಟಿ ಅವ್ಯವಹಾರ ನಡೆಸಿದ ಎಂದು ಆರೋಪಿಸಿದರು.
ಶಿಕ್ಷಣ ಸಚಿವರು ಕಮಿಷನ್ ದಂಧೆ ನಡೆಸುತ್ತಿದ್ದು ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿ ನ್ಯಾಯಾಲಯ ನಿಂದನೆ ಮಾಡಿದ್ದಾರೆ.ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ಕಮಿಷನ್ ಪಡೆದಿರುವ ಸಚಿವರ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಕ್ಯಾಂಪಸ್ ಫ್ರಂಟ್ ಜಿಲ್ಲಾ ಜಂಟಿ ಕಾರ್ಯದರ್ಶಿ ನಿದಾ, ಕಾರ್ಯದರ್ಶಿ ಸಾಧಿಕ್ ಸೇರಿದಂತೆ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.