ಹೆಬ್ಬಳ್ಳಿ –
ಹೆಬ್ಬಳ್ಳಿಯಲ್ಲಿ ಜನನಿ ಪ್ರತಿಷ್ಠಾನದದಿಂದ ಮನೆಪಾಠ ಕಲಿಕಾ ಕೇಂದ್ರಗಳು ಆರಂಭಗೊಂಡಿದೆ.ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜನನಿ ಪ್ರತಿಷ್ಠಾನದ ವತಿಯಿಂದ ಶಾಲಾ ಮಕ್ಕಳಿಗೆ ಮನೆಪಾಠ ಕಲಿಕಾ ಕೇಂದ್ರ ಗಳನ್ನು ಆರಂಭಿಸಲಾಯಿತು.ಧಾರವಾಡದ ಉಪವಿಭಾಗ ಅಧಿಕಾರಿಗಳು ಅಶೋಕ ತೇಲಿ ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಇವರ ಕನಸಿನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು
ಹೆಬ್ಬಳ್ಳಿ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಯಲ್ಲಿ ಚಾಲನೆ ನೀಡಲಾಯಿತು.ಮನೆಪಾಠದ ಕಲಿಕಾ ಕೇಂದ್ರಗಳಗೆ ಕಪ್ಪು ಹಲಗೆ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಯಿತು.ತಾಲೂಕು ಪಂಚಾಯತಿ ಮಾಜಿ ಅದ್ಯಕ್ಷೆ ಸುಮಂಗಲಾ ಕೌದೆಣ್ಣವರ ಮನೆಪಾಠ ಕಲಿಕಾ ಕೇಂದ್ರದಿಂದ ಮಕ್ಕಳಿಗೆ ತುಂಬಾ ಅನುಕೂಲ ಆಗಲಿದೆ ಶಾಲೆಯಲ್ಲಿ ಶಿಕ್ಷಕರು ನೀಡಿದ ಮನೆಪಾಠವನ್ನು ಕೆಲವು ಮಕ್ಕಳು ಮಾಡುವುದಿಲ್ಲ ಏಕೆಂದರೆ ಅಂತಹ ಮಕ್ಕಳು ರೈತರು, ಕೂಲಿ ಕಾರ್ಮಿಕರ ಮಕ್ಕಳಾಗಿರುತ್ತಾರೆ ಅವರಿಗೆ ಈ ಕಲಿಕಾ ಕೇಂದ್ರ ಮೂಲಕ ಶಾಲೆಯಲ್ಲಿ ಶಿಕ್ಷಕರು ನೀಡಿದ ಗ್ರಹ ಪಾಠವನ್ನು ಮಾಡಿಸುವುದರಿಂದ ಗುಣಾತ್ಮಕ ಶಿಕ್ಷಣ ಸಾಧ್ಯವಿದೆ ಎಂದರು.
ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಮಾತನಾಡಿ ಬಹುತೇಕ ಮಕ್ಕಳು ಶಿಕ್ಷಕರ ನೀಡಿದ ಮನೆಗೆಲಸವನ್ನು ಮಾಡಿಕೊಂಡು ಬರುವುದಿಲ್ಲ ಶಾಲೆಯಲ್ಲಿ ಶಿಕ್ಷಕರು ಪ್ರಶ್ನೆ ಮಾಡಿದಾಗ ಏನಾದರೂ ಕಾರಣ ಹೇಳುತ್ತಾರೆ.ಇಂತಹ ಮಕ್ಕಳಿಗೆ ಇದು ತುಂಬಾ ಪ್ರಯೋಜನಕಾರಿ ಆಗಲಿದೆ.ಈ ಕಲಿಕಾ ಕೇಂದ್ರ ಗಳನ್ನು ನಡೆಸಲು ನಾನು ಸಂಪೂರ್ಣ ಸಹಕಾರ ನೀಡುವೆ ಎಂದರು.ಶಿಕ್ಷಕ ಎಲ್ ಐ ಲಕ್ಕಮ್ಮನವರ ಮಾತನಾಡಿ ಈ ಮನೆಪಾಠದ ಕಲಿಕಾ ಕೇಂದ್ರದಿಂದ ಮಕ್ಕಳು ಎರಡು ಗಂಟೆಗಳ ಕಾಲ ಮೊಬೈಲ್ ಬಳಕೆಯಿಂದ ದೂರವಾಗಿ ಕಲಿಕಾ ಚೇತರಿಕೆಯಲ್ಲಿ ತೊಡಗಿಕೊಳ್ಳುವರು ಇದರಿಂದ ಪಾಲಕರು ಮತ್ತು ಶಿಕ್ಷಕರಿಗೆ ತುಂಬಾ ಸಹಕಾರಿ ಆಗಲಿದೆ ಇದು ರಜೆಯ ಅವದಿಯಲ್ಲಿ ಅಷ್ಟೇ ಅಲ್ಲದೇ ನಿರಂತರ ವಾಗಿ ಸಾಯಂಕಾಲ 6- ರಿಂದ 8 ಎರಡು ತಾಸುಗಳವರೆಗೆ ಮಾತ್ರ ಕೇವಲ 20 ಮಕ್ಕಳು 4 ರಿಂದ ಏಳನೆಯ ತರಗತಿ ಯ ಮಕ್ಕಳಿಗೆ ಈ ಕಲಿಕಾ ಕೇಂದ್ರಗಳನ್ನು ನಡೆಸಲಾಗುತ್ತದೆ ಎಂದರು
ಜನನಿ ಪ್ರತಿಷ್ಠಾನದ ನೋಡಲ್ ಅಶ್ವಿನ್ ಮಾತನಾಡಿ ಈ ಕಲಿಕಾ ಕೇಂದ್ರದ ಪ್ರೇರಕರಿಗೆ ಸಂಸ್ಥೆ ಪ್ರತಿ ತಿಂಗಳು ಒಂದು ಸಾವಿರ ಗೌರವ ಧನವನ್ನು ನೀಡಲಾಗುತ್ತದೆ, ಜೊತೆಗೆ ಮೇಲಿಂದ ಮೇಲೆ ತರಬೇತಿಯನ್ನು ನೀಡಿ ಗ್ರಾಮದ ಶಿಕ್ಷ ಣದ ಗುಣಮಟ್ಟವನ್ನು ಸುಧಾರಿಸಲು ಇದೊಂದು ಅತ್ಯುತ್ತ ಮ ಮಾರ್ಗವಾಗಿದೆ,ಈಗಾಗಲೇ ಶಿಬಾರಗಟ್ಟಿ,ಮುಳಮು ತ್ತಲು,ಕುರುಬಗಟ್ಟಿಯಲ್ಲಿ ಅತ್ಯಂತ ಯಶಸ್ವಿಯಾಗಿ ಈ ಕಲಿಕಾ ಕೇಂದ್ರಗಳು ನಡೆಯುತ್ತಿವೆ, ಗ್ರಾಮಸ್ಥರು ಸಹ ತುಂಬಾ ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದರು ಶಾಲಾ ಭಿವೃದ್ದಿ ಸಮಿತಿಯ ಸದಸ್ಯ ಚಂದ್ರಶೇಖರ ಮಟ್ಟಿ ಶಿಕ್ಷಕಿ ನಾಗಮ್ಮ ಹೂಗಾರ ಇದ್ದರು.