ಬೆಂಗಳೂರು –

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಮಾದರಿ ಶಾಲೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರಥಾಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2022-23 ನೇ ಸಾಲಿನಿಂದಲೇ ಮಾದರಿ ಶಾಲೆಗಳ ಆರಂ ಭಕ್ಕೆ ನಿರ್ಧರಿಸಲಾಗಿದ್ದು ಮೊದಲ ಹಂತದಲ್ಲಿ ಹೋಬಳಿಗೆ ಒಂದು ಮಾದರಿ ಶಾಲೆ ತೆರೆಯಲಾಗುವುದು.ಇನ್ನು ವಿದ್ಯಾರ್ಥಿಗಳ ಸಂಖ್ಯೆಯನ್ನಾಧರಿಸಿ ಕನಿಷ್ಟ ಮುಂದಿನ 10 ವರ್ಷಗಳವರೆಗೆ ಅಸ್ತಿತ್ವದಲ್ಲಿರುವಂತಹ ಶಾಲೆಗಳನ್ನು ರಿಪೇರಿ ಮಾಡಿಸುವುದರ ಜೊತೆಗೆ ಹೊಸ ಕೊಠಡಿಗಳನ್ನು ನಿರ್ಮಿಸಲಾಗುವುದು.ಮಕ್ಕಳ ಕೊರತೆಯಿರುವ ಹಾಗೂ ಎರಡರಿಂದ ಮೂರು ವರ್ಷಗಳಲ್ಲಿ ಮುಚ್ಚುವ ಹಂತದಲ್ಲಿ ರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ಸಂಯೋ ಜನೆ ಮಾಡಲಾಗುವುದು ಎಂದರು.ಹಾಗೇ ಈ ಒಂದು ಶಾಲೆಗಳಿಗೆ ಅವಶ್ಯಕ ವಾಗಿ ಬೇಕಾದ ಶಿಕ್ಷಕರ ನೇಮಕ ಮಾಡಲಾಗುತ್ತದೆ ಎಂದರು.