ಕೊಪ್ಪಳ –

ಕೊಪ್ಪಳ ಜಿಲ್ಲಾ ರೆಡ್ಡಿ ನೌಕರರ ಬಂಧುಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳುವದೇನೆಂದರೆ.ದಿನಾಂಕ: 06/05/2022 ರ ಶುಕ್ರವಾರ ರಾತ್ರಿ ವಾಟ್ಸಪ್ ನಮ್ಮ ರೆಡ್ಡಿ ಗ್ರೂಪ್ಸ್ ಗಳಲ್ಲಿ ಕರ್ನಾಟಕ ರಾಜ್ಯ ರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ )ಬೆಂಗಳೂರ ಎನ್ನುವ ಲೆಟರ್ ಹೆಡ್ ನಲ್ಲಿ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಎಂದು ಇರುವ ಮಾಹಿತಿ ಯನ್ನು ನೋಡಲಾಗಿ ಸಾಕಷ್ಟು ಜನ ನಮ್ಮವರನ್ನು ವಿಚಾರಿಸಲಾಗಿ ನಮಗೆ ಮಾಹಿತಿಯೇ ಇಲ್ಲಾ ಎನ್ನುವ ಅಭಿಪ್ರಾಯಗಳು ಬಂದಿದ್ದು ಮೇಲಾಗಿ ತಾವು ಬಸವ ಜಯಂತಿ ದೊಡ್ಡ ಹಬ್ಬದಂದು ಸಭೆ ಕರೆಯುವ ಮುಂಚೆ ಅಂದು ಸಭೆ ಕರೆಯಲು ಮಾಹಿತಿ ಚರ್ಚಿಸಬೇಕಿತ್ತು. ಯಾಕೆಂದರೆ ಅಂದು ಅನೇಕ ಮದುವೆಗಳು ಮನೆಯ ವಾಸ್ತು, ಶಾಲಾ ಕಾಲೇಜು ರಜೆ ಇರುವದರಿಂದ ಕುಟುಂಬ ಸಮೇತ ರಜೆಗೆ ಹೋಗಿರುತ್ತಾರೆ.ತಾವು ಪೂರ್ವ ಭಾವಿ ಸಭೆ ಎಂದು ನಮೂದಿಸಿ ಏಕಾಏಕಿ ದಿಡೀರನೆ 45 ರಿಂದ 50 ಜನ ನಮ್ಮವರನ್ನು ಇಟ್ಟುಕೊಂಡು ಜಿಲ್ಲಾ ಸಂಘ ಮಾಡಿದ್ದು ಶೋಭೆ ತರಲಾರದು.ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಬುದ್ದಿವಂತ, ವಿಚಾರವಂತ ಮುತ್ಸದ್ದಿಗಳು ಇದ್ದಾರೆ.ಸಂಘಟನೆ ಮಾಡುವ ಮೊದಲು,ಎಲ್ಲಾ ಸದಸ್ಯರಿಗೆ ರಜಿಸ್ಟ್ರೆಶನ್ ಕಾಫಿ,ಬೈಲಾ ಪ್ರತಿ,ಸದಸ್ಯತ್ವ ಅಭಿಯಾನ,ಮೇಲಾಗಿ ನಮ್ಮ ಜೀಲ್ಲೆಯ, ತಾಲೂಕುಕುಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿ, ಅವರ ಮಾರ್ಗದರ್ಶನದಲ್ಲಿ ಆದರೆ ಸೂಕ್ತ.ಮತ್ತು ಮುಂದಿನ ದಿನಮಾನಗಳಲ್ಲಿ ಯಶಸ್ವಿ ಯಾಗುವದು ನೌಕರರ ಹಿತವನ್ನು ಬಯಸಿ ಮಾಡಿದ ಈ ಸಂಘಟನೆಯ ಚುಕ್ಕಾಣಿ ಹಿಡಿಯುವ ವ್ಯಕ್ತಿ ಘಟ್ಟಿ ಧ್ವನಿಯ ದಿಟ್ಟ ನಿಲುವಿನ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾ ವನೆ ಹೊಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗು ವದು.ಕಾರಣ ಮೊದಲು ಯಾವ ಯಾವ ಇಲಾಖೆಯಲ್ಲಿ ನಮ್ಮವರು ಇದ್ದಾರೆ ಅದರ ಪಟ್ಟಿ ಮಾಡಿಕೊಂಡು ಭದ್ರ ವಾದ ಸಂಘಟನೆಯನ್ನು ಕಟ್ಟಲು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರೋಣ.ಈ ಮಾಹಿತಿಯನ್ನು ನಿಮಗೆ ಗೊತ್ತಿರುವ ನಮ್ಮವರಿಗೆ ವೈಯಕ್ತಿಕವಾಗಿ ಹಾಗೂ ನಮ್ಮ ರೆಡ್ಡಿ ಸಮಾಜದ ಗ್ರೂಪ್ಸ್ ಗಳಿಗೆ ಹಾಗೂ ನಮ್ಮ ಮುಖಂ ಡರಿಗೆ ಮತ್ತು ಜನಪ್ರತಿನಿಧಿಗಳಿಗೆ ರವಾನಿಸಬೇಕೆಂದು ವಿನಂತಿಸುತ್ತ ಕೋರಿಕೊಳ್ಳುವೆ.ಈ ಪಟ್ಟಿಯನ್ನು ನೋಡ ಲಾಗಿ ಸಭೆಗೆ ಬರದೇ ಇರುವವರನ್ನು ಪದಾಧಿಕಾರಿಗಳಾಗಿ ಮಾಡಿದ್ದು ವಿಶೇಷ ವಿದೆ ಎಂದು ತಿಳಿದು ಬರುತ್ತಿದೆ.

ಈ ರೀತಿ ಅಸಮಾಧಾನಕ್ಕೆ ಅವಕಾಶ ಮಾಡಿ ಕೊಡದಂತೆ ಸಮಾನ ಮನಸ್ಕರಾಗಿ ಹಿರಿಯರ,ಮುಖಂಡರ, ಮಾರ್ಗದ ರ್ಶನ ದಲ್ಲಿ ಮುಂದುವರಿಯೋಣ.ನಿಯಮಾನುಸಾರವಾಗಿ ಸಂಘಟನೆ ಮಾಡಲು ಹೇಳಿದವರನ್ನು ಗ್ರೂಪ್ ನಿಂದ ರಿಮೂವ್ ಮಾಡುವುದು ಸಂಘಟಕರಿಗೆ ಶೋಭೆ ತರು ವಂತ ಲಕ್ಷಣವಲ್ಲ.ಕೊಪ್ಪಳ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಪೂರ್ವ ದಲ್ಲಿ ಸಮಾಜದ ಸಂಘಟನೆಗೆ ತನು ಮನ ಧನ ಅರ್ಪಿಸಿದ ೫೦ ಸಾವಿರ ರೂಪಾಯಿಗಳನ್ನು ನೀಡಿದ ನೌಕರರ ಬಂಧುಗಳ ನಂಬರ್ ಅನ್ನ ವಾಟ್ಸ್ಯಾಪ್ ಗೃಪ್ ನಲ್ಲಿ ಸೇರಿಸದೇ ಇರುವುದು ವಿಷಾದನಿಯ ಸಂಗತಿ.
ನಿಯಮಾನುಸಾರ ಸಂಘಟನೆ ರಚನೆಯಾಗಬೇಕೆಂದು ಆಗ್ರಹಿಸುತ್ತಿರುವುದು ಹೀಗೆ ಇಂಥದೊಂದು ಸಂದೇಶ ವೊಂದು ಸಧ್ಯ ವಾಟ್ಸ್ ಆಪ್ ಗ್ರೂಪ್ ನಲ್ಲಿ ಹರಿದಾಡು ತ್ತಿದ್ದು ಇದಕ್ಕೆ ಸಂಬಂಧಿಸಿದವರೇ ಉತ್ತರಿಸಬೇಕು ಇದು ಬಲ ಮೂಲ ಗಳಿಂದ ತಿಳಿದು ಬಂದಿದೆ.


ಪೂರ್ವ ಭಾವಿ ಸಭೆ ಎಂದು ಕರೆದು ಏಕಾಏಕಿ ಪದಾಧಿಕಾ ರಿಗಳ ಆಯ್ಕೆ ಮಾಡಿದ್ದು ಅನೇಕ ನೌಕರರಿಗೆ ಅಸಮಾ ಧಾನದ ಹೊಗೆಯಾಡುತ್ತಿದೆ.ಕೂಡಲೇ ರಾಜ್ಯ ಪದಾಧಿಕಾ ರಿಗಳು ಇದನ್ನು ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಎಡೆ(ದಾರಿ)ಮಾಡಿಕೊಟ್ಟಂತಾಗುವದು.