ಬೆಂಗಳೂರು –
ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಚುರುಕು ಮುಟ್ಟಿಸೋ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿ ಸಿದೆ.ಈ ಕುರಿತು ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾ ಗಿರುವ ಇನ್ನೂ ಲಾ ಅಂಡ್ ಆರ್ಡರ್ ನ ಹೆಚ್ಚುವರಿ ಡಿಜಿಪಿ ಯಾಗಿದ್ದ ಸಿ ಹೆಚ್ ಪ್ರತಾಪ್ ರೆಡ್ಡಿಯವರನ್ನು ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.ಕಮಲ್ ಪಂತ್ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡ ಲಾಗಿದೆ.
ಕೆ ಎಸ್ ಆರ್ ಪಿಯ ಹೆಚ್ಚುವರಿ ಡಿಜಿಪಿಯಾಗಿದ್ದಂತ ಅಲೋಕ್ ಕುಮಾರ್ ಅವರನ್ನು ಲಾ ಅಡ್ ಆರ್ಡರ್ ನ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.ಕ್ರೈಂ ಮತ್ತು ಟೆಕ್ನಿಕಲ್ ಸರ್ವಿಸ್ ನ ಎಡಿಜಿಪಿಯಾಗಿದ್ದಂತ ಆರ್ ಹಿತೇಂದ್ರ ಅವರನ್ನು ಕೆ ಎಸ್ ಆರ್ ಪಿಯ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.ಕ್ರೈಂ ವಿಭಾಗದ ಡಿಸಿಪಿಯಾಗಿ ದ್ದಂತ ಎಂ ಎನ್ ಅನುಚೇತನ್ ಅವರನ್ನು ವರ್ಗಾವಣೆ ಮಾಡಿದ್ದು ಅವರನ್ನು ಸಿಐಡಿಯ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ಸ್ಥಾನದಲ್ಲಿದ್ದಂತ ಟಿ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.