ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಅವಧಿಯೊಳಗೆ ವೇತನ ಆಯೋಗವು ಜಾರಿಗೆ ಬರಲಿದ್ದು ಈಗಾಗಲೇ ಸರ್ಕಾರಿ ನೌಕರರು-ಹಣಕಾಸು ಇಲಾಖೆ ಸಮಾಲೋಚನೆ ಕಾರ್ಯ ಮುಗಿದಿದೆ.ಹೌದು ವೇತನ ಆಯೋಗ ರಚನೆ ಸಂಬಂಧ ಪೂರ್ವಭಾವಿಯಾಗಿ ಹಣಕಾಸು ಇಲಾಖೆ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳ ಜೊತೆ ಈಗಾಗಲೇ ಸಮಾ ಲೋಚನೆ ನಡೆಸಿದ್ದು ವೇತನ ಆಯೋಗದ ಮೇಲಿನ ಆಪೇ ಕ್ಷೆಗಳ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ಶೀಘ್ರವೇ ಮುಖ್ಯಮಂತ್ರಿಗೆ ಪೂರಕ ಕಡತ ಮಂಡಿಸಲಿದ್ದಾರೆ.
ಇನ್ನೊಂದು ವಾರದೊಳಗೆ ಕೆಲವು ಪೂರಕ ದಾಖಲೆ ಹಾಗೂ ವರದಿ ಸಲ್ಲಿಸುವುದಾಗಿ ಸರ್ಕಾರಿ ನೌಕರರ ಸಂಘ ಕಾಲಾವ ಕಾಶ ಪಡೆದುಕೊಂಡಿದೆ.ಕೇಂದ್ರ ಸರ್ಕಾರ ತನ್ನ ನೌಕರರ ಎ, ಬಿ, ಸಿ, ಡಿ ಶ್ರೇಣಿಗೆ ಎಷ್ಟು ಖರ್ಚು ಮಾಡುತ್ತಿದೆ ಇಲ್ಲಿ ಯಾವ ರೀತಿ ಹೊಸ ಆಯೋಗದ ಶಿಫಾರಸು ಅನುಷ್ಠಾನ ಮಾಡ ಬೇಕಾಗಬೇಕಾಗುತ್ತದೆ ಎಂಬ ಬಗ್ಗೆ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು.ಜೊತೆಗೆ ಇಲ್ಲಿನ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವ ಅಗತ್ಯ ವೇನು ಎಂಬ ಸರ್ಕಾರಿ ನೌಕರರ ಸಂಘದ ವಾದವನ್ನು ಹಣಕಾಸು ಇಲಾಖೆ ಅಧಿಕಾರಿಗಳು ಒಪ್ಪಿಕೊಂಡರು.
2022-23ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ವೇತನ ಆಯೋಗ ರಚನೆ ಮಾಡುವಂತೆ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.ಬಜೆಟ್ ನಲ್ಲಿ ಈ ವಿಷಯ ಪರಿಗಣನೆ ಆಗದ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶಿಸಿ, ಒತ್ತಡ ತಂದಿದ್ದರು.ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇತನ ಆಯೋಗ ರಚನೆ ಮಾಡಿ ಈ ವರ್ಷದಲ್ಲೇ ಅನುಷ್ಠಾನ ಮಾಡುವುದಾಗಿಯೂ ಘೋಷಿ ಸಿದ್ದರು.
ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚನೆಯಾಗ ಬೇಕು.ಈ ಹಿಂದೆ ಐದು ವರ್ಷ ಕಳೆದ ಬಳಿಕ ಒಂದು ವರ್ಷ ಒತ್ತಾಯ ಮಾಡಿದ ನಂತರ ಆಯೋಗ ರಚನೆಯಾಗಿ ಅದರ ಅನುಷ್ಠಾನವಾಗುವಾಗ 7-8 ವರ್ಷ ಆಗುತ್ತಿತ್ತು. ಆದರೆ ಈ ಬಾರಿ ಕಳೆದ ಆಯೋಗದ ಅವಧಿ ಐದು ವರ್ಷ ಪೂರ್ಣಗೊಳ್ಳುವುದರೊಳಗೆ ಹೊಸ ಆಯೋಗ ರಚನೆ ಬಗ್ಗೆ ಘೋಷಣೆ ಮಾಡಿದೆ.ಜುಲೈ 30ಕ್ಕೆ ಹಿಂದಿನ ಆಯೋ ಗದ ಅವಧಿ ಐದು ವರ್ಷ ಪೂರ್ಣಗೊಳ್ಳುತ್ತದೆ. ಅಷ್ಟರೊ ಳಗೆ ಸಮಿತಿ ರಚನೆಯಾಗುವ ವಿಶ್ವಾಸವಿದೆ ಎಂದು ಹೇಳಿ ದರು.ಕೇಂದ್ರದ ಹಾಗೂ ರಾಜ್ಯದ ವೇತನ ಶ್ರೇಣಿಯಲ್ಲಿ ವ್ಯತ್ಯಾಸವಿದೆ. ಈ ಬಗ್ಗೆ ಕೇಸ್ ಸ್ಟಡಿ ಮಾಡಿ ನಾವು ಸರ್ಕಾರಕ್ಕೆ ಅಧ್ಯಯನ ವರದಿಕೊಡುವವರಿದ್ದೇವೆ ಎಂದು ಷಡಾಕ್ಷರಿ ಅವರು ಹೇಳಿದ್ದಾರೆ.
40 ವರ್ಷದ ಬೇಡಿಕೆಗೆ ಈಗ ಚಾಲನೆ ಹೌದು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವಷ್ಟೇ ವೇತನವನ್ನು ನಮಗೂ ಕೊಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆ 40 ವರ್ಷ ಹಿಂದಿನದ್ದು ಈ ಬಾರಿ ಬಜೆಟ್ ಮಂಡನೆ ಪೂರ್ವಭಾವಿ ಯಲ್ಲಿ ಈ ಕೂಗು ಪುನಃ ಕೇಳಿಬಂದಿತ್ತು.ಸರ್ಕಾರಿ ನೌಕರರ ಸಂಘ ನಿವೃತ್ತ ಅಧಿಕಾರಿಗಳ ಸಮಿತಿ ಬೇರೆ ಬೇರೆ ರಾಜ್ಯಗ ಳಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿಸಿತ್ತು.25 ರಾಜ್ಯ ಗಳಲ್ಲಿ ಕೇಂದ್ರಕ್ಕೆ ಸರಿಸಮಾನ ವೇತನ ನೀಡಲಾಗುತ್ತಿದೆ. ಈ ಸಂಗತಿಯನ್ನು ಸಂಘ ಸರ್ಕಾರದ ಗಮನಕ್ಕೆ ತಂದಿತ್ತು.
10 ಸಾವಿರ ಕೋಟಿ ರೂಪಾಯಿ ಬೇಕು ಹೌದು ರಾಜ್ಯದಲ್ಲಿ 5,20 ಲಕ್ಷ ಸರ್ಕಾರಿ ನೌಕರರು 4 ಲಕ್ಷ ನಿವೃತ್ತ ನೌಕರರು,3 ಲಕ್ಷ ದಷ್ಟು ನಿಗಮ,ಪ್ರಾಧಿಕಾರದ ಸಿಬ್ಬಂದಿಯ ವೇತನ ಪರಿಷ್ಕರಣೆಯಾಗಿ,ಕೇಂದ್ರಕ್ಕೆ ಸರಿಸಮಾನ ವೇತನ ನಿಗದಿ ಯಾದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 10 ಸಾವಿರ ಕೋಟಿ ರೂ.ಹೆಚ್ಚುವರಿ ಬೇಕಾಗಲಿದೆ ಎಂಬ ಪ್ರಾಥಮಿಕ ಅಂದಾಜಿದೆ.2.60 ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರಕ್ಕೆ ಈ 10 ಸಾವಿರ ಕೋಟಿ ಹೊರೆಯಾಗದು ಎಂಬುದು ಸರ್ಕಾರಿ ನೌಕರರ ಸಂಘದ ಅಭಿಪ್ರಾಯವಾ ಗಿದೆ.ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಉಪಕಾರ್ಯದರ್ಶಿ ಪದ್ಮಾವತಿ,ಸರ್ಕಾರಿ ನೌಕರರ ಸಂಘದ ಖಜಾಂಚಿ ಶ್ರೀನಿವಾಸ್,ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ಮತ್ತಿತರರು ನಿಯೋಗದಲ್ಲಿದ್ದರು.