ಬೆಂಗಳೂರು –
ಹೋಮ್ ವರ್ಕ್ ವಿಚಾರ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಎಂದು ಎನ್ಇಪಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.1-2ನೇ ತರಗತಿ ಮಕ್ಕಳಿಗೆ ಆಟ,ಡ್ರಾಮಾ,ಪದ್ಯ ಹೇಳಿಸುತ್ತಾ ಹೀಗೆ ಚಟುವಟಿಕೆ ಮೂಲಕ ಪಾಠ ಮಾಡುವುದು.ಅಕ್ಷರ ಜ್ಞಾನ ಹಾಗೂ ಸಂಖ್ಯಾ ಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದಿದ್ದಾರೆ.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ಜಾರಿ ಯಲ್ಲಿದೆ.ಎನ್ಇಪಿ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲೂ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಮಕ್ಕಳಿಗೆ ಒತ್ತಡ ಹೇರುವುದನ್ನು ತಡೆಯಲು ಸರ್ಕಾರ ಬದ್ಧವಾಗಿದೆ ಎಂದರು.ಇತ್ತ ಪುಟ್ಟ ಮಕ್ಕಳಿಗೆ ಹೋಂ ವರ್ಕ್ ನೀಡುವುದು ದೊಡ್ಡ ಹೊರೆ.ಎರಡನೇ ತರಗತಿವರೆಗೆ ಹೋಂ ವರ್ಕ್ ನೀಡದೇ ಇರುವುದು ಒಳ್ಳೆಯದು ಎಂದು ಪೋಷಕಿ ಸುಧಾಗೌಡ ಅಭಿಪ್ರಾಯಪಟ್ಟಿದ್ದಾರೆ.