ಧಾರವಾಡ –
ಶಾಸಕ ಅಮೃತ ದೇಸಾಯಿ ಅವರ ಧಾರವಾಡದ ನಿವಾಸ ದಲ್ಲಿ ಧಾರವಾಡ ಗ್ರಾಮೀಣ ಪ್ರದೇಶದ ಮಂಡಲದ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಯಿತು.ಶಾಸಕ ಅಮೃತ ದೇಸಾಯಿ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಚಟುವಟಿಕೆ ಮುಂದಿನ ಯೋಜನೆ ಸೇರಿ ದಂತೆ ಹಲವಾರು ವಿಚಾರಗಳನ್ನು ಚರ್ಚೆ ಮಾಡಲಾ ಯಿತು.
ಬೂತ್ ಮಟ್ಟದಲ್ಲಿ ನಡೆಯಬೇಕಾದ ಕೆಲಸಗಳ ಬಗ್ಗೆ ಶಾಸಕ ಅಮೃತ ದೇಸಾಯಿ ಅವರು ಚರ್ಚೆಯನ್ನು ಮಾಡಿದರು. ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಧಾರವಾಡ ಗ್ರಾಮೀಣ ಪ್ರದೇಶದಲ್ಲಿನ ಯೋಜನೆ ಮತ್ತು ಚಟುವಟಿ ಕೆಗಳ ಕುರಿತಂತೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಲಾ ಯಿತು.ಇನ್ನೂ ಈ ಒಂದು ಸಮಯದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ, ನಾರಾಯಣ ಜರತಾಘರ, ರಾಜಕು ಮಾರ ಬಸವಾ,ಮಂಜು ಜಾಧವ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.