ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾದರಿಯ 7ನೇ ವೇತನ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ನಡೆಸಿದರು ಹೌದು CM ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಈ ಒಂದು ಸಭೆಯಲ್ಲಿ ಮೊದಲು ರಾಜ್ಯದಲ್ಲಿನ ಅತಿವೃಷ್ಟಿ,ಪ್ರವಾಹ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಈ ಒಂದು ವಿಚಾರದ ನಂತರ ಪ್ರಮುಖವಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ 7ನೇ ವೇತನ ನೀಡುವ ಕುರಿತು ಸಮಿತಿ ರಚನೆ ಮಾಡುವ ಕುರಿತು ಮಹತ್ವದ ಸಭೆ ನಡೆಸಿದರು ಸಚಿವರಾದ ವಿ.ಸೋಮಣ್ಣ,ಡಾ. ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ ಸೋಮಶೇಖರ್,ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ,ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸೇರಿದಂತೆ
ಹಲವರ ಸಮ್ಮುಖದಲ್ಲಿ ತುಂಬಾ ಮಹತ್ವದ ಸಭೆ ಮಾಡಿ ಗೌಪ್ಯವಾಗಿ ಸಮಿತಿ ರಚನೆ ಮಾಡುವ ಮತ್ತು ನಂತರದ ಕುರಿತು ಚರ್ಚೆ ಮಾಡಿ ಸಂಪೂರ್ಣವಾಗಿ ಮಾಹಿತಿ ಪಡೆದರು ಅಲ್ಲದೇ ಸೆಪ್ಟೆಂಬರ್ 6 ರಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡುವ ಸಮಾರಂಭ ದಲ್ಲಿ ಘೋಷಣೆ ಮಾಡುವ ಕುರಿತು ಮಾಹಿತಿ ಯನ್ನು ಅಧಿಕಾರಿ ಗಳಿಗೆ ನೀಡಿದರು.