ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ಸ್ವಂತ ಜಿಲ್ಲೆಗೆ ಹೋಗ ಲಾರದೆ ಬೇಸತ್ತಿರುವ ಸಾವಿರಾರು ಶಿಕ್ಷಕರು ಈಗ ಅಂತಿ ಮವಾಗಿ ಬೆಂಗಳೂರು ಚಲೋ ಮಾಡಲು ಮುಂದಾಗಿ ದ್ದಾರೆ.ಈಗಾಗಲೇ ಈ ಕುರಿತಂತೆ ಅಂತಿಮವಾದ ರೂಪ ರೇಷೆಯನ್ನು ಮಾಡಿದ್ದು ಒಂದಿಷ್ಟು ಶಿಕ್ಷಕರು ಹೋರಾಟ ಕ್ಕಾಗಿ ಪೊಲೀಸರ ಬಳಿ ಅನುಮತಿಯನ್ನು ಪಡೆದುಕೊಳ್ಳ ಲು ಓಡಾಡುತ್ತಿದ್ದರೆ
ಮತ್ತೊಂದಿಷ್ಟು ಶಿಕ್ಷಕರ ನಿಯೋಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಸಮಯವನ್ನು ನಿಗದಿ ಮಾಡಿದ್ದು ಪ್ಲಾನ್ ಮಾಡಿದ್ದಾರೆ.ಸಾಮಾನ್ಯವಾಗಿ ಇದೇಲ್ಲವನ್ನು ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರು ಮಾಡಬೇಕು ಆದರೆ ಈ ಕುರಿತಂತೆ ಅವರು ಸ್ಪಂದಿಸದ ಹಿನ್ನಲೆಯಲ್ಲಿ ಬೇಸತ್ತಿರುವ ಶಿಕ್ಷಕರು ಕ್ಲಬ್ ಹೌಸ್ ನ ಸಭೆಯಲ್ಲಿ ಈ ಕುರಿತಂತೆ ಪೈನಲ್ ಸಭೆಯೊಂ ದನ್ನು ಮಾಡಿಕೊಂಡು ರೂಪರೇಷೆಯನ್ನು ಮಾಡಿಕೊಂ ಡಿದ್ದು ಜವಾಬ್ದಾರಿ ಯೊಂದಿಗೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಊರು ಬಂಧು ಬಳಗ ಹೆಂಡತಿ ಮಕ್ಕಳು ಹೀಗೆ ಎಲ್ಲವನ್ನೂ ಬಿಟ್ಟು ನೂರಾರು ಕಿಲೋ ಮೀಟರ ದೂರದಲ್ಲಿದ್ದುಕೊಂಡು ಕರ್ತವ್ಯವನ್ನು ಈವರೆಗೆ ಮಾಡಿರುವ ಇವರು ಈಗ ಎಲ್ಲರ ಹಾಗೇ ಸ್ವಂತ ಜಿಲ್ಲೆಗೆ ಹೋಗುವ ಉದ್ದೇಶಕ್ಕಾಗಿ ಈ ಒಂದು ಒಟಿಎಸ್ ಹೋರಾಟವನ್ನು ಮಾಡುತ್ತಿದ್ದಾರೆ.ಶಿಕ್ಷಕರ ಸಂಘ ಟನೆಯ ನಾಯಕರು ಈ ಕುರಿತಂತೆ ಸ್ಬಂದಿಸಿ ಸಮಸ್ಯೆಗ ಳನ್ನು ಪರಿಹಾರ ಮಾಡಬೇಕು ಆದರೆ ಅವರು ಯಾಕೋ ಸ್ಪಂದಿಸದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಶಿಕ್ಷಕರೇ ಈಗ ಬೀದಿಗಿಳಿದು ಬೆಂಗಳೂರು ಚಲೋ ಮಾಡಲು ಮುಂದಾ ಗಿದ್ದಾರೆ.ದಯಮಾಡಿ ಹೋರಾಟಕ್ಕೆ ಬೆಂಬಲ ನೀಡಿ ಶಿಕ್ಷಕ ಬಂಧುಗಳೇ.