This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Sports News

ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಚಾಲನೆಗೆ ಸಿದ್ದಗೊಂಡ ನಗದು ರಹಿತ ಚಿಕಿತ್ಸೆ ಯೋಜನೆ…..ಯೋಜನೆ ಉಪಯೋಗ ಕುರಿತು ಕಂಪ್ಲೀಟ್ ಮಾಹಿತಿ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರ ಬಹುದಿನಗಳ ಕನಸಾದ ನಗದುರಹಿತ ಆರೋಗ್ಯ ಸೇವೆ ನನಸಾಗುವ ದಿನಗಳು ಹತ್ತಿರ ಬಂದಿದ್ದು ಇನ್ನೆರಡು ದಿನ ಗಳಲ್ಲಿ ಚಾಲನೆ ದೊರಕಲಿದೆ.ನಗದುರಹಿತ ಆರೋಗ್ಯ ಸೇವೆ ಯೋಜನೆಯನ್ನು ಜಾರಿಗೆ ತರುವ ಮೂಲಕ ಅವರ ಬಾಳಿ ನಲ್ಲಿ ಆಶಾಕಿರಣ ಮೂಡಿಸಬೇಕೆಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಯತ್ನ ಈಗ ಫಲ ನೀಡುತ್ತಿದೆ.

ಹೌದು ಆರ್ಥಿಕ ಇಲಾಖೆಯ ಸಮ್ಮತಿಯೊಂದಿಗೆ ಯೋಜನೆ ಸಿದ್ಧವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.6ಕ್ಕೆ ಸರ್ಕಾರದ ಆದೇಶ ಬಿಡುಗಡೆ ಮಾಡುವುದರೊಂ ದಿಗೆ ಯೋಜನೆ ಚಾಲನೆ ಪಡೆದುಕೊಳ್ಳಲಿದೆ.

ಗಂಭೀರ ಕಾಯಿಲೆಗೆ ತುತ್ತಾದರೆ ಚಿಕಿತ್ಸೆಗೆ ಸಾಲ ಮಾಡುವ ಪರಿಸ್ಥಿತಿ ರಾಜ್ಯ ಸರ್ಕಾರಿ ನೌಕರರದ್ದಾಗಿತ್ತು.ಆದ್ದರಿಂದಲೇ ನಗದುರಹಿತ ಚಿಕಿತ್ಸೆಯ ಯೋಜನೆ ಬರಬೇಕೆಂದು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಸಿದ್ದರು. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯಲ್ಲಷ್ಟೇ ಇಂಥ ವ್ಯವಸ್ಥೆ ಇದೆ.ಹಿಂದೆಲ್ಲ ಮರು ಪಾವತಿಗಾಗಿ ವರ್ಷಗಟ್ಟಲೆ ಅಲೆದಾಡಿದರೂ ಪೂರ್ಣ ಮೊತ್ತ ಸಿಗುವ ವಿಶ್ವಾಸ ಇರಲಿಲ್ಲ ಆದ್ದರಿಂದಲೇ ನಗದುರಹಿತ ಸೇವೆ ನೀಡುವಂತೆ ಹೋರಾಟ ನಡೆಸುತ್ತಿದ್ದರು.ಸರ್ಕಾರ 2014 ರಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತಂದಿತು.ಅದರ ಮುಂದುವರಿದ ಭಾಗ ವಾಗಿ ಈಗ ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಯೋಜನೆ ಜಾರಿಗೆ ಬರುತ್ತಿದೆ.

ಸರ್ಕಾರಿ ನೌಕರರ ಮಾಹಿತಿ ಸಂಗ್ರಹ ಈಗಾಗಲೇ ಮುಗಿದಿದೆಇದಕ್ಕಾಗಿ ಪ್ರತ್ಯೇಕ ಕೋಶವನ್ನು ಸ್ಥಾಪಿಸಲಾಗಿದೆ. ಅದಕ್ಕೆ ಕೆಎಎಸ್ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರ ನ್ನಾಗಿ ನೇಮಕ ಮಾಡಲಾಗಿದೆ.ಅವರೊಂದಿಗೆ ವೈದ್ಯಾಧಿಕಾ ರಿಗಳು ಇದ್ದಾರೆ.ಸಂಪೂರ್ಣ ಜವಾಬ್ದಾರಿ ಈ ಕೋಶದ್ದೇ ಆಗಿರುತ್ತದೆ.

  • ಸೆ.6ರಂದು ಯೋಜನೆಗೆ ಮುಖ್ಯಮಂತ್ರಿ ಚಾಲನೆ
  • ವಾರ್ಷಿಕ 1250 ಕೋಟಿ ರೂ. ವೆಚ್ಚ ಅಂದಾಜು
  • 1000ಕ್ಕೂ ಅಧಿಕ ರೋಗಗಳಿಗೆ ಅನ್ವಯ
  • ಹೊರರೋಗಿಗಳಿಗೂ ಉಚಿತ ಚಿಕಿತ್ಸೆ
  • ಪ್ರತ್ಯೇಕ ಸಾಫ್ಟ್​ವೇರ್ ಅಭಿವೃದ್ಧಿ
  • ಗಡಿ ಭಾಗದ ಹೊರ ರಾಜ್ಯಗಳ ಆಸ್ಪತ್ರೆ ಸೇರಿ 500ಕ್ಕೂ ಹೆಚ್ಚು ಆಸ್ಪತ್ರೆಗಳ ಜತೆ ಒಪ್ಪಂದ

500ಕ್ಕೂ ಹೆಚ್ಚು ಆಸ್ಪತ್ರೆಗಳು ರಾಜ್ಯದಲ್ಲಿ ಆಯುಷ್ಮಾನ್ ಭಾರತ ಕರ್ನಾಟಕ ಹಾಗೂ ಸಿಜಿಎಸ್ಎಚ್ ನಲ್ಲಿ ನೋಂದಾಯಿತ 500 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಸರ್ಕಾರಿ ನೌಕರರ ಆರೋಗ್ಯ ಯೋಜನೆಯ ಸೌಲಭ್ಯ ನೀಡಲು ಗುರುತಿಸಲಾಗಿದೆ.ಅಲ್ಲದೇ ಹೊರ ರಾಜ್ಯಗಳ ಅಂದರೆ,ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣಗಳ ಆಸ್ಪತ್ರೆಗಳನ್ನು ಸಹ ಈ ಯೋಜನೆಯಲ್ಲಿ ನೋಂದಣಿ ಮಾಡಲಾಗುತ್ತಿದೆ.

ಎಷ್ಟು ಕಾಯಿಲೆಗೆ ಚಿಕಿತ್ಸೆ….. ಹಿಂದೆ ಹಲ್ಲು,ಕಣ್ಣು,ಹೊರರೋಗಿಗಳ ಚಿಕಿತ್ಸೆಗೆ ಮರು ಪಾವತಿ ಇರಲಿಲ್ಲ.ಈಗ ಎಲ್ಲ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.ಮಕ್ಕಳಿಗೆ ಕಾಡುವ ರೋಗಗಳಿಗೂ ಚಿಕಿತ್ಸೆಗೆ ಅವಕಾಶ ಇದೆ.ಅಂದಾಜು 1,000 ಬಗೆಯ ರೋಗಗಳ ಚಿಕಿತ್ಸೆಯನ್ನು ಇದು ಒಳಗೊಳ್ಳಲಿದೆ.ನೌಕರರ ಮಾಹಿತಿ ಇರುವ ಎಚ್ ಆರ್ ಎಂಎಸ್ ಅನ್ನು ಸುವರ್ಣ ಆರೋಗ್ಯ ಟ್ರಸ್ಟ್ ಜೊತೆಗೆ ಲಿಂಕ್ ಮಾಡಲಾಗುತ್ತದೆ.ಅದೇ ಮಾಹಿತಿ ಆಧಾರದಲ್ಲಿ ಸ್ಮಾರ್ಟ್ ಕಾರ್ಡ್ ಗಳು ಸಿದ್ಧವಾಗುತ್ತಿವೆ. ಜಿಲ್ಲಾಮಟ್ಟದಲ್ಲಿಯೇ ಅವುಗಳ ವಿತರಣೆ ಕಾರ್ಯ ಶೀಘ್ರವೇ ಆರಂಭವಾಗಲಿದೆ.

ಸಾಫ್ಟ್ ವೇರ್ ಅಭಿವೃದ್ಧಿ

ಯೋಜನೆ ಸಂಪೂರ್ಣ ಆನ್ ಲೈನ್ ನಲ್ಲಿಯೇ ನಡೆಯ ಲಿದೆ.ನೌಕರರಿಗೆ ಸ್ಮಾರ್ಟ್ಕಾರ್ಡ್ ನೀಡಲಾಗುತ್ತದೆ.ಅದನ್ನು ತೋರಿಸಿದರೆ ಚಿಕಿತ್ಸೆ ಸಿಗಲಿದೆ.ಆಸ್ಪತ್ರೆಗಳ ಜೊತೆ ಒಪ್ಪಂದ, ಬಿಲ್ ಸಲ್ಲಿಕೆ,ಆಸ್ಪತ್ರೆಗಳಿಗೆ ಬಿಲ್ ಪಾವತಿಗಳೆಲ್ಲವೂ ಆನ್ ಲೈನ್ ನಲ್ಲಿಯೇ ನಡೆಯಲಿವೆ.ಅದಕ್ಕಾಗಿಯೇ ಪ್ರತ್ಯೇಕ ಸಾಫ್ಟ್ ವೇರ್ ಸಹ ಸಿದ್ಧವಾಗಿದೆ.

ಅನುಕೂಲಗಳು

  • ಯಾವುದೇ ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದಿ ದ್ದರೂ ಆಸ್ಪತ್ರೆಗೆ ದಾಖಲಾಗಬಹುದು
  • ಆರೋಗ್ಯ ಸೇವೆಗಾಗಿ ಸಾಲ ಮಾಡಿಕೊಂಡು ಪಡಿಪಾಟಲು ಪಡಬೇಕಾಗಿಲ್ಲ
  • ಚಿಕಿತ್ಸೆ ಪಡೆದ ನಂತರ ಮರು ಪಾವತಿಗಾಗಿ ಕಚೇರಿಗೆ ಅಲೆದಾಡುವ ಪ್ರಮೇಯವಿಲ್ಲ
  • ಸರ್ಕಾರಿ ಆಸ್ಪತ್ರೆಗಳ ಮೇಲಿನ ಅವಲಂಬನೆ ತಪ್ಪಲಿದೆ

ಹೊರರೋಗಿ ಚಿಕಿತ್ಸೆ

ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರು ಸೇರಿ ಒಟ್ಟಾರೆ 30 ಲಕ್ಷ ಜನರಿಗೆ ಈ ಯೋಜನೆ ಅನುಕೂಲವಾಗ ಲಿದೆ. ಒಳರೋಗಿ ಅಥವಾ ಹೊರ ರೋಗಿಗಳಾಗಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

ಸಿಬ್ಬಂದಿಯಿಂದಲೂ ದೇಣಿಗೆ ಪಾವತಿ – ನಗದುರಹಿತ ಚಿಕಿತ್ಸೆಗೆ ಸರ್ಕಾರಿ ನೌಕರರು ವಾರ್ಷಿಕ ದೇಣಿಗೆಯನ್ನು ಪಾವತಿಸಬೇಕಾಗುತ್ತದೆ.ನೌಕರರ ಮೂಲ ವೇತನದ ಶೇ.1 ರಷ್ಟು ಮೊತ್ತವನ್ನು ನಿಗದಿಯಾಗಲಿದೆ. ಅಂದಾಜು 200 ಕೋಟಿ ರೂ.ಗಳಷ್ಟಾಗುವ ಈ ಮೊತ್ತ ವನ್ನು ಆರ್ಥಿಕ ಇಲಾಖೆ ಕಡಿತ ಮಾಡಿಕೊಂಡು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಪಾವತಿ ಮಾಡಲಿದೆ.ಅದರ ಮೂಲಕ ಆಸ್ಪತ್ರೆಗಳಿಗೆ ಪಾವತಿಯಾಗಲಿದೆ.ನಗದುರಹಿತ ಚಿಕಿತ್ಸೆ ನೀಡಲು ವಾರ್ಷಿಕ 1,250 ಕೋಟಿ ರೂ.ಗಳು ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.ಇದುವರೆಗೂ ಚಿಕಿತ್ಸಾ ವೆಚ್ಚದ ಮರು ಪಾವತಿಯಲ್ಲಿ ಸರ್ಕಾರ ವಾರ್ಷಿಕ 200 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ ಇನ್ನೂ ಸಧ್ಯ ಈ ಒಂದು ವಿಚಾರ ಕುರಿತು ಷಡಾಕ್ಷರಿ ಸರ್ ಅಭಿಮಾನಿ ಬಳಗದ ರಾಜ್ಯದ ಸಂಚಾಲಕರಾದ ಮಹೇಶ್ ಮಂಡ್ಯ ಬೂದನೂರ ಮತ್ತು ಸರ್ವ ಸದಸ್ಯರು ನಿರಂತರ ವಾಗಿ ಒತ್ತಾಯವನ್ನು ಮಾಡಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk