ಹುಬ್ಬಳ್ಳಿ –
ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರು ತಮ್ಮಲ್ಲಿನ ಪ್ರತಿಭೆಯಯ ಪ್ರದರ್ಶನ ಮಾಡಿದ್ದಾರೆ
ಹೌದು ಉತ್ತರ ಕರ್ನಾಟಕ ಪ್ರಸಿದ್ಧ ಕಲೆ ದೊಡ್ಡಾಟ ದಲ್ಲಿ ಹೆಜ್ಜೆ ಹಾಕಿದ್ದಾರೆ ಇನ್ಸ್ಪೆಕ್ಟರ್ ಅವರು.ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಮ್. ಕಾಲಿ ಮೀರ್ಚಿ ಅವರು ಈಗಾಗಲೇ ಹಲವಾರು ವಿಭಿನ್ನ ಕಾರ್ಯ ಗಳ ಮೂಲಕ ವಿಶೇಷವಾಗಿ ಗುರುತಿಸಿ ಕೊಳ್ಳುತ್ತಿದ್ದು ಈಗ ಮತ್ತೊಂದು ವಿಶೇಷ ತೆಯೊಂದಿಗೆ ಗಮನ ಸೆಳೆದಿದ್ದಾರೆ
ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಈ ಒಂದು ವಿಭಿನ್ನ ತಮ್ಮಲ್ಲಿನ ಪ್ರತಿಭೆ ಯನ್ನು ಪ್ರದರ್ಶನ ಮಾಡಿದ್ದಾರೆ
ಡಾ.ಚಂದ್ರಶೇಖರ ಕಂಬಾರ ಅವರ ದತ್ತಿ ಕಾರ್ಯಕ್ರಮದಲ್ಲಿ ಕರ್ಣಪರ್ವ ಎಂಬ ದೊಡ್ಡಾಟದಲ್ಲಿ ಕಲೆ ಪ್ರದರ್ಶಿಸಿದ್ದಾರೆ ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರು.ವೃಷಸೇನ(ಕರ್ಣನ ಮಗ) ಪಾತ್ರದಲ್ಲಿ ವಿಶೇಷ ವೇಶ ಧರಿಸಿದ ಮನರಂಜಿಸಿದ ಇನ್ಸ್ಪೆಕ್ಟರ್ ಕಾಲಿಮೀರ್ಚಿ ಇನ್ಸ್ಪೆಕ್ಟರ್ ಕಲೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದ್ದಾರೆ

























