ಬೆಂಗಳೂರು –
ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಸದಾ ವಿಶೇಷತೆ ಮತ್ತು ಉತ್ಸಾಹದಿಂದ ಓಡಾಡಿಕೊಂಡು ಕೆಲಸ ಕಾರ್ಯ ಗಳನ್ನು ಮಾಡುತ್ತಿರುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಈಗ ಇಡಿ ರಾಜ್ಯದಲ್ಲಿನ ನದಾಫ್ ಪಿಂಜಾರ ಮನ್ಸೂರಿ ಸಮಾಜದ ಸಮಸ್ಯೆಗಳ ಕುರಿತಂತೆ ಗಮನ ಹರಿಸಿದ್ದಾರೆ.
ಹೌದು ನಮ್ಮ ರಾಜ್ಯದಲ್ಲಿ ನದಾಫ್ ಪಿಂಜಾರ ಮನ್ಸೂರಿ ಸಮಾಜವು ಅತ್ಯಂತ ಹಿಂದುಳಿದ ಸಮಾಜಗಳಲ್ಲಿ ಒಂದಾ ಗಿದ್ದು ಹೀಗಾಗಿ ಈ ಒಂದು ವಿಚಾರ ಕುರಿತಂತೆ ಶಾಸಕ ಅರವಿಂದ ಬೆಲ್ಲದ ಬೆಂಗಳೂರಿನಲ್ಲಿ ಸಭೆಯನ್ನು ಮಾಡಿ ದರು.ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ಮಾಡಿ ಸರ್ಕಾರದಿಂದ ಒದಗಿಸಲಾಗುವ ಯಾವುದೇ ಜನಪರ ಯೋಜನೆಗಳು ಅವರಿಗೆ ಸಮರ್ಪಕ ವಾಗಿ ದೊರೆಯದ ಕಾರಣ ಈ ಸಮಾಜದ ಏಳ್ಗೆ ಕುರಿತಂತೆ ಚರ್ಚೆಯನ್ನು ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆ ಯಲ್ಲಿ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಸಮಾಜದ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಯಿತು.ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ,ಸಿ ಸಿ ಪಾಟೀಲ್,ನದಾಫ್ ಪಿಂಜಾರ ಸಮಾಜದ ಮುಖಂಡರಾದ ಜಲೀಲಸಾಬ ಹಾಗೂ ರಾಜ್ಯದ ವಿವಿಧ ತಾಲ್ಲೂಕುಗಳಿಂದ ಬಂದಂತಹ ಪ್ರತಿನಿಧಿ ಗಳು ಉಪಸ್ಥಿತರಿದ್ದರು.