ಹೃದಯಾಘಾತದಿಂದ ಬಸ್ ಚಾಲಕ ಸಾವು

Suddi Sante Desk

ಬೆಳಗಾವಿ –

ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಎರಡನೇಯ ದಿನಕ್ಕೇ ಕಾಲಿಟ್ಟಿದೆ. ನಿನ್ನೇಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಪ್ರತಿಭಟನೆಯನ್ನು ಮಾಡ್ತಾ ಇದ್ದಾರೆ. ಇನ್ನೂ ಇತ್ತ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾರಿಗೆ ನೌಕರರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.ನಿನ್ನೇಯಷ್ಟೇ ಹೋರಾಟದಲ್ಲಿ ಪಾಲ್ಗೊಂಡು ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಮನೆಗೆ ತೆರಳಿದ್ದ ಚಾಲಕ ದತ್ತಾ ಮಂಡೋಳ್ಕರ್. ರಾತ್ರಿ ಹೃದಘಾತವಾಗಿದೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದ್ರೂ ಚಿಕಿತ್ಸೆ ಫಲಿಸದೇ ಸಾವೀಗಿಡಾದ್ರ.

ಬೆಳಗಾವಿಯ ನಗರದ ವಡಗಾವಿಯ ನಿವಾಸಿಯಾಗಿರುವ ದತ್ತಾ ಮಂಡೋಳ್ಕರ್(58) ಮೃತ ಬಸ್ ಚಾಲಕನಾಗಿದ್ದಾನೆ. ಸರ್ಕಾರಿ ನೌಕರನ್ನಾಗಿ ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಪ್ರತಿಭಟನೆ ನಡೆಯುತ್ತಿದ್ದು ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಮನೆಗೆ ತೆರಳಿದ ನಂತರ ಹೃದಯಾಘಾತವಾಗಿದೆ.ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ಬಸ್ ಚಾಲಕ ದತ್ತಾ ಮಂಡೋಳ್ಕರ್(58)ಗೆ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ನೋವು ಕಾಣಿಸಿಕೊಂಡಿದ್ದರಿಂದ ರಾತ್ರಿಯೇ ಮನೆಗೆ ತೆರಳಿದ್ದು ನಂತರ ಆಸ್ಪತ್ರೆಗೆ ಹೋಗುವಾಗ ಹೃದಯಾಘಾತವಾಗಿ ಬಸ್ ಚಾಲಕ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿಯ 2ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಬಸ್ ಚಾಲಕ ದತ್ತಾ ಮಂಡೋಳ್ಕರ್ ನಿನ್ನೆಯವರೆಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದ್ದು ಇನ್ನೂ ಇಂದು ಪ್ರತಿಭಟನಾ ನಿರತ ಸಾರಿಗೆ ನೌಕರರು ಅಗಲಿದ ಸಹೋದ್ಯೋಗಿ ಮಿತ್ರರಿಗೆ ಭಾವಪೂರ್ಣ ಶೃದ್ದಾಂಜಲಿ ಅರ್ಪಿಸಿದ್ರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.