ಬೇಲ್ ಗಾಗಿ ಹೈಕೋರ್ಟ್ ಮೆಟ್ಟಿಲೆರಿದ ವಿನಯ ಕುಲಕರ್ಣಿ – ಅರ್ಜಿ ಸಲ್ಲಿಕೆ

Suddi Sante Desk

ಧಾರವಾಡ –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಜಾಮೀನು ಪಡೆಯಲು ಹೈಕೋರ್ಟ್ ಮೆಟ್ಟಿಲೆರಿದ್ದಾರೆ. ಬೇಲ್ ಗಾಗಿ ಸಲ್ಲಿಸಿದ್ದ ಇವರ ಅರ್ಜಿಯನ್ನು ಧಾರವಾಡ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ವಜಾಗೊಳಿಸಿದೆ. ಜಾಮೀನು ನೀಡಲು ನಿರಾಕರಿಸುತ್ತಿದ್ದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರು ಧಾರವಾಡ ಹೈಕೋರ್ಟ್ ಮೆಟ್ಟಿಲೆರಿದ್ದಾರೆ.

ಕೆಳ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ ವಿನಯ ಕುಲಕರ್ಣಿ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಜಾಮೀನು ಕೋರಿ ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರು ನವೆಂಬರ್ 27 ರಂದು‌, ಧಾರವಾಡ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ಮಾಡುತ್ತಾ ಹಲವು ಬಾರಿ ಮುಂದೂಡುತ್ತಾ ಬಂದಿತ್ತು. ಡಿಸೆಂಬರ್ 7 ರಂದು ಸುಧೀರ್ಘವಾಗಿ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾಯಾಧೀಶರು, ಅಂತಿಮ ತೀರ್ಪು ಕಾಯ್ದಿರಿಸಿ.ಅರ್ಜಿಯನ್ನು ಡಿಸೆಂಬರ್ 14 ಕ್ಕೆ ಮುಂದೂಡಿದ್ದರು.

ಕೊನೆಗೂ ಡಿಸೆಂಬರ್ 14 ರಂದು ಮಧ್ಯಾಹ್ನದ ಮೂರನೇ‌ ಹೆಚ್ಚುವರಿ ಸೆಷನ್ ನ್ಯಾಯಾಧೀಶರು ಜಾಮೀನು ಅರ್ಜಿ ವಜಾ ಮಾಡಿ ಆದೇಶ ಹೋರಡಿಸಿದರು. ಈ ನ್ಯಾಯಾಲಯದಲ್ಲಿ ಬೇಲ್ ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ಈಗ ವಿನಯ ಕುಲಕರ್ಣಿ ಪರ ವಕೀಲರು ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯದ ಅದೇಶವನ್ನು ಪ್ರಶ್ನೆ ಮಾಡಿ ಹಾಗೂ ನಮ್ಮ ಕಕ್ಷಿಗಾರನಿಗೆ ಜಾಮೀನು ನೀಡುವಂತೆ ಕೋರಿ ಈಗ ಧಾರವಾಡ ಹೈಕೋರ್ಟ್‌ಗೆ ವಿನಯ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಸಧ್ಯ ಅರ್ಜಿ ಸಲ್ಲಿಕೆಯಾಗಿದ್ದು ಇನ್ನೇರೆಡು ದಿನಗಳಲ್ಲಿ ವಿಚಾರಣೆಗೆ ಬರಲಿದೆ, ಇನ್ನೂ ಇತ್ತ ಈ ಹಿಂದೆ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಬಂಧನದ ಭೀತಿಯಲ್ಲಿದ್ದ ಚನ್ನಕೇಶವ ಟಿಂಗರಿಕರ್ ಜಾಮೀನು ಅರ್ಜಿಯನ್ನು ಕಳೆ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ಇವರು ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದರು. ಸಧ್ಯ ಮಾಜಿ ಸಚಿವರು ಕೂಡಾ ಹೀಗೆ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಇನ್ನೇರೆಡು ದಿನಗಳಲ್ಲಿ ವಿಚಾರಣೆಗೆ ಬರಲಿದ್ದು ಹೈಕೋರ್ಟ್‌ನಲ್ಲಾದರು ಮಾಜಿ ಸಚಿವರಿಗೆ ಜಾಮೀನು ಸಿಗುತ್ತದೆನಾ ಇಲ್ಲ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.