ಬೈಕ್ ಗಳ ಮುಖಾಮುಖಿ ಡಿಕ್ಕಿ – ಒರ್ವ ಸ್ಥಳದಲ್ಲೇ ಸಾವು

Suddi Sante Desk

ಧಾರವಾಡ –

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ದೊಡವಾಡ ಬಳಿ ನಡೆದಿದೆ.ಧಾರವಾಡದ ಗರಗ ಗ್ರಾಮದ ದೊಡವಾಡ ಬಳಿ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ.

ವೇಗವಾಗಿ ಹೋಗುತ್ತಿದ್ದ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಬೈಕ್ ನಲ್ಲಿ ಬೈಕ್ ಸವಾರೊಂದಿಗೆ ಇಬ್ಬರು ಮಹಿಳೆಯರು ಹೊರಟಿದ್ದರು.

ಇನ್ನೊಂದು ಬೈಕ್ ನಲ್ಲಿ ಒರ್ವ ಬೈಕ್ ಸವಾರ ಹೊರಟಿದ್ದನು. ಎರಡು ಬೈಕ್ ಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದ್ದು ಒರ್ವ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇನ್ನೂ ಅಪಘಾತದಲ್ಲಿ ಸಿದ್ದಪ್ಪ ಸೊಬರದ ಎಂಬುವರು ಸಾವಿಗೀಡಾದ ಮೃತ ಯುವಕನಾಗಿದ್ದಾನೆ‌.ಇನ್ನೂ ಅಪಘಾತದ ವಿಷಯ ತಿಳಿದ ಗರಗ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು .

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.