ಧಾರವಾಡ –
ರಾಜ್ಯಾಧ್ಯಂತ ಇಂದು ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ವಿದ್ಯಾಕಾಶಿ ಧಾರವಾಡದಲ್ಲೂ ಸ್ಪಂದನೆ ಸಿಕ್ಕಿದ್ದು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಯಿಂದ ಈ ಒಂದು ಕಾರ್ಯಕ್ರಮವು ನಗರದ ಕೆಸಿಡಿ ಮೈದಾನದಲ್ಲಿ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಜ್ಯದ ಸಚಿವರು ಸ್ಥಳೀಯ ಶಾಸಕರೊಂದಿಗೆ ಪಾಲ್ಗೊಂಡು ಗಾಯನ ಹೇಳಿದರು.ಧಾರವಾಡದ ಕೆಸಿಡಿ ಕಾಲೇಜಿನ ಮೈದಾನದಲ್ಲಿ ಗಾಯನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿ ಹಾಡು ಹೇಳಿದರು.ಧಾರವಾಡ ನಗರದ ಬಹುತೇಕ ಶಾಲೆಯ ಮಕ್ಕಳು ಕೂಡಾ ಈ ಒಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಹಾಡು ಹೇಳಿದರು
ಸಾವಿರಾರು ವಿದ್ಯಾರ್ಥಿಗಳ ಜೊತೆ ಧ್ವನಿಗೂ ಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಿಗೆ ಸಚಿವ ಆಚಾರ್ಯ ಹಾಲಪ್ಪ ಶಾಸಕ ರಾದ ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ,ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ತವನಪ್ಪ ಅಷ್ಟಗಿ ಸೇರಿದಂತೆ ಸ್ಥಳೀಯ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿ ನಿಧಿಗಳು ಸೇರಿದಂತೆ ಹಲವರು ಪಾಲ್ಗೊಂಡು ಈ ಒಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ದಲ್ಲಿ ಧ್ವನಿ ಗೂಡಿಸಿ ಮೆರುಗು ನೀಡಿದರು.
ಇದರೊಂದಿಗೆ ಧಾರವಾಡದಲ್ಲೂ ಕೂಡಾ ಈ ಒಂದು ಕಾರ್ಯಕ್ರಮವೂ ಯಶಶ್ವಿಯಾಗಿ ಕಂಡು ಬಂದಿತು ನಂತರ ಮಕ್ಕಳೊಂದಿಗೆ ಮೈದಾನದಲ್ಲಿ ಹಾಡು ಹಾಡುತ್ತಾ ಹೆಜ್ಜೆ ಹಾಕಿದರು