ಬೈಕ್ ಸ್ಕಿಡ್ ಒರ್ವ ಸಾವು ಮತ್ತೊರ್ವನಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು

Suddi Sante Desk

ಕಾಟಿನಕಂಬ –

ಬೈಕ್ ಸ್ಕಿಡ್ ಆಗಿ ಸ್ಥಳದಲ್ಲಿಯೇ ಓರ್ವ ಬೈಕ್ ಸವಾರೊಬ್ಬ ಸಾವಿಗೀಡಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಓರ್ವ ನಿಗೆ ಗಂಭೀರ ಗಾಯವಾಗಿದೆ‌.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಕಾಟಿನಕಂಬ ಗ್ರಾಮದ ಬಳಿ ಈ ಒಂದು ಅಪಘಾತ ನಡೆದಿದೆ.ತಡರಾತ್ರಿ ರಾತ್ರಿ ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮತ್ತೋರ್ವ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಗಾಯಾಳುವನ್ನು ಮೊದಲು ಸಂಡೂರು ಆಸ್ಪತ್ರೆಗೆ ದಾಖಲಿಸಿ ನಂತರ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ.

ಕಾಟಿನಕಂಬ ವಾಸಿ ಮಲಿಯಪ್ಪ(50)ಸ್ಥಳದಲ್ಲಿ ಮೃತಪಟ್ಟಿದ್ದಾನೆ,ಮೃತನ ಮಗ ಸಂತೋಷ(18)ತೀವ್ರ ಗಾಯಗೊಂಡಿದ್ದಾನೆ.

ಇವರಿಬ್ಬರು ಬೈಕ್ ನಲ್ಲಿ ಬಂಡ್ರಿ ಗ್ರಾಮದಿಂದ ಕಾಟಿನಕಂಬಕ್ಕೆ ತೆರಳುವಾಗ ಬೈಕ್ ಸ್ಕಿಡ್ ಆಗಿದೆ. ಸುದ್ದಿ ತಿಳಿದ ಕೂಡ್ಲಿಗಿ108 ಸಿಬ್ಬಂದಿಯವರಾದ ಇ.ಎಂ.ಟಿ ಮಾರೇಶ ಹಾಗೂ ಪೈಲಟ್ ಪಂಪಾಪತಿ,ವಾಹನದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ರಕ್ಷಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.