ಮದುವೆ ಆಗುವುದಾಗಿನಂಬಿಸಿ ಕೈ ಕೊಟ್ಟ ಪ್ರಿಯಕರ – ಪ್ರೀತಿಸಿದವನ ಮನೆಯ ಮುಂದೆ ಯುವತಿಯ ಧರಣಿ

Suddi Sante Desk

ಕೋಲಾರ –

ಮದುವೆ ಆಗುವುದಾಗಿನಂಬಿಸಿ ಕೈ ಕೊಟ್ಟ ಪ್ರಿಯಕರನ ಮನೆಯ ಮುಂದೆ ಯುವತಿಯೊಬ್ಬಳು ಧರಣಿ ಮಾಡುತ್ತಿರುವ ಪ್ರಕರಣವೊಂದು ಕೋಲಾರದಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಪ್ರೀತಿಸಿದವನಿಗಾಗಿ ಪ್ರಿಯಕರನ ಮನೆ ಮುಂದೆ ಯುವತಿ ಧರಣಿ ಮಾಡುತ್ತಿದ್ದಾಳೆ.ಹಾಸನ ಮೂಲದ ಮೇಘನಾ ಪ್ರೀತಿಸಿ ಮೋಸ ಹೋದ ಯುವತಿಯಾಗಿದ್ದಾಳೆ. ಅದೇ ಗ್ರಾಮದ ಯುವಕ ಹರೀಶ್ ಗಾಗಿ ಯುವತಿಯ ಪಟ್ಟು ಹಿಡಿದಿದ್ದಾಳೆ.

ತನ್ನ ಬಳಿ ಮದುವೆ ಆಗುವುದಾಗಿ ಹೇಳಿ 5 ಲಕ್ಷ ದುಡ್ಡು ಪಡೆದಿದ್ದಾನೆ.ಅಲ್ಲದೇ ಕಳೆದ ಎರಡು ವರ್ಷಗಳಿಂದ ಪ್ರೀತಿಸಿ ಕೈ ಕೊಟ್ಟಿದ್ದಾನೆ ಎಂದು ಯುವತಿಯ ಆರೋಪ ಮಾಡಿದ್ದಾಳೆ.ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅದೇ ಕಂಪನಿಯಲ್ಲಿ ಟಾಟಾ ಎಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಹರೀಶ್.

ಎರಡು ವರುಷಗಳಿಂದ ಪ್ರೀತಿಸಿ ಮದುವೆಯಾಗೊದಾಗಿ ಹೇಳಿದ್ದ ಯುವಕ ಈಗ ಕೈಕೊಟ್ಟಿದ್ದು ಇದರಿಂದ ನೊಂದ ಯುವತಿ ಯುವಕನ ಮನೆಯ ಮುಂದೆ ಧರಣಿ ಮಾಡುತ್ತಿದ್ದಾಳೆ. ಇನ್ನೂ ವಿಷಯ ತಿಳಿದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.