ಎತ್ತಿನ ಬಂಡಿಗೆ ಬೈಕ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಸಾವು – ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ

Suddi Sante Desk

ಹೊಸಪೇಟೆ –

ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣವಾಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಉಜೈನಿ ಬಳಿಯ ಬೆನಕನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.

ಶಿವಕುಮಾರ್ (34)ನಿವೇದಿತ(23)
ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ‌.ಸಂಡೂರಿನ ಶಿವಕುಮಾರ್ ಮತ್ತು ಜಗಳೂರು ತಾಲೂಕಿನ ಹೊಸಕೇರಿ ಗ್ರಾಮದ ನಿವೇದಿತ ಇತ್ತೀಚೆಗೆ ವಿವಾಹ ವಾಗಿದ್ದರು.ಇವರೇ ಮೃತರಾದವರಾಗಿದ್ದಾರೆ.

ತವರು ಮನೆಗೆ ಬಂದಿದ್ದ ನಿವೇದಿತ ಅವರನ್ನು ಕರೆದುಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಈ ಒಂದು ಅಪಘಾತ ನಡೆದಿದೆ.

ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.