ಹಾವೇರಿ –
ರಾಜ್ಯದ ಬಜೆಟ್ ನ್ನು ಬರುವ ಫೆಬ್ರುವರಿಯಲ್ಲಿ ಮಂಡನೆ ಮಾಡೊದಾಗಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹೇಳಿದರು.ಹಾವೇರಿ ಜಿಲ್ಲೆಯ ಶಿಗ್ಗಾವಿ ಯಲ್ಲಿ ಮಾತನಾಡಿದ ಅವರು ಜನವರಿಯಿಂದ ಈ ಕುರಿತಂತೆ ಸಿದ್ಧತೆಯನ್ನು ಆರಂಭ ಮಾಡೊದಾಗಿ ಹೇಳಿದರು
ಪ್ರಸಕ್ತ ಸಾಲಿನ ಆಯವ್ಯಯವನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸುತ್ತಿದ್ದೇನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಸಿಎಂ ಬೊಮ್ಮಾಯಿ ಫೆಬ್ರವರಿ ತಿಂಗಳಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ ಈಗಾ ಗಲೇ ಎರಡು ಬಾರಿ ಹಣಕಾಸಿನ ಇಲಾಖೆ ಯೊಂದಿಗೆ ಸಭೆ ನಡೆಸಿ
ಈ ಕುರಿತಂತೆ ಚರ್ಚಿಸ ಲಾಗಿದೆ ಸಧ್ಯ ಬೆಳಗಾವಿ ಯಲ್ಲಿ ನಡೆಯುತ್ತಿರುವ ಬೆಳಗಾವಿಯ ಅಧಿವೇ ಶನ ಮುಗಿದ ಬಳಿಕ ಎಲ್ಲಾ ಇಲಾಖೆಗಳು ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು ಜನವರಿ ತಿಂಗಳಿನಿಂದ ಬಜೆಟ್ ನ ಪೂರ್ವಭಾವಿ ಸಿದ್ಧತೆಗ ಳನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇನ್ನೂ ಈ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಒಂದು ಮಾಹಿತಿಯಿಂ ದಾಗಿ ಹೊಸದೊಂದು ನಿರೀಕ್ಷೆ ಮೂಡಿದ್ದು ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ ಹೊಸದೊಂದು ನಿರೀಕ್ಷೆ ಮೂಡಿದ್ದು 7ನೇ ವೇತನ ಆಯೋಗ ಹೊಸ ಬಜೆಟ್ ನಲ್ಲಿ ಘೋಷಣೆ ಯನ್ನು ಮಾಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹಾವೇರಿ…..