This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಹಾವೇರಿ

ಭ್ರಷ್ಟ DDPI ಮತ್ತು ಟೀಮ್ ನ್ನು ಲೋಕಾಯುಕ್ತ ಬಲೆಗೆ ಕೆಡವಿದ ಶಿಕ್ಷಕರು – ಕಳೆದ ತಿಂಗಳವಷ್ಟೇ ಭಡ್ತಿ ಪಡೆದು ಡಿಡಿಪಿಐಯಾಗಿದ್ದ ಅಂದಾನಪ್ಪ ರೊಂದಿಗೆ FDA ಕೂಡಾ ಟ್ರ್ಯಾಪ್…..

WhatsApp Group Join Now
Telegram Group Join Now

ಹಾವೇರಿ

ಭ್ರಷ್ಟ DDPI ಮತ್ತು ಟೀಮ್ ನ್ನು ಲೋಕಾಯುಕ್ತ ಬಲೆಗೆ ಕೆಡವಿದ ಶಿಕ್ಷಕರು – ಕಳೆದ ತಿಂಗಳವಷ್ಟೇ ಭಡ್ತಿ ಪಡೆದು ಡಿಡಿಪಿಐಯಾಗಿದ್ದ ಅಂದಾನಪ್ಪ ರೊಂದಿಗೆ FDA ಕೂಡಾ ಟ್ರ್ಯಾಪ್

ಹೌದು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಲಂಚ ಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಭ್ರಷ್ಟ ಡಿಡಿಪಿಐ ಮತ್ತು ಕಚೇರಿಯ ಸಿಬ್ಬಂದಿಯೊಬ್ಬರು ಲೋಕಾ ಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿನ ಶಿಕ್ಷಕರಿಗೆ ಕೆಲ ವಿಚಾರಗಳ ಕುರಿ ತಂತೆ ಹಣದ ಬೇಡಿಕೆಯನ್ನು ಇಡಲಾಗಿತ್ತು ಪ್ರತಿಯೊಬ್ಬ ಶಿಕ್ಷಕರಿಗೂ 5 ಸಾವಿರ ರೂಪಾಯಿ ಹಣವನ್ನು ನಿಗದಿ ಮಾಡಿ ಮುಂಚಿತವಾಗಿ 7 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಹಾವೇರಿ ಡಿಡಿಪಿಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪ್ರಮೋಷನ್, ಇನ್ಕ್ರಿಮೆಂಟ್ ಗಾಗಿ ಪ್ರತಿ ಶಿಕ್ಷಕರು ತಲಾ 5 ಸಾವಿರ ನೀಡಬೇಕು ಎಂಬುದಾಗಿ ಹೊಸ ದೊಂದು ಆದೇಶವನ್ನು ಹೊರಡಿಸಿದ್ದರು ಹೀಗಾಗಿ ಮುಂಚಿತವಾಗಿ 7 ಸಾವಿರ ಲಂಚದ ಹಣವನ್ನು ಪಡೆಯುತ್ತಿದ್ದಾಗ ಹಾವೇರಿ ಡಿಡಿಪಿಐ ಲೋಕಾ ಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಹಾವೇರಿ ತಾಲೂಕು ಡಿಡಿಪಿಐ ಆಗಿ ಅಂದಾನಪ್ಪ ಎಂಬುವರು ಕಳೆದ 1 ತಿಂಗಳ ಹಿಂದಷ್ಟೇ ಡಿಡಿಪಿಐ ಆಗಿ ಆಗಮಿಸಿದ್ದರು.ಹೀಗೆ ಬಂದಿದ್ದಂತ ಅವರು ಪ್ರಮೋಷನ್, ಇನ್ಕ್ರಿಮೆಂಟ್ ಗಾಗಿ ಶಿಕ್ಷಕರು ಕನಿಷ್ಠ 5 ಸಾವಿರ ನೀಡಬೇಕು ಎಂಬುದಾಗಿ ಪರ್ಮಾನು ಹೊರಡಿಸಿದ್ದರಂತೆ.

ಇಂತಹ ಡಿಡಿಪಿಐ ಅಂದಾನಪ್ಪ ಅವರ ಲಂಚ ಬಾಕ ತನಕ್ಕೆ ಜಿಲ್ಲೆಯ ಶಿಕ್ಷಕರು ಬೇಸತ್ತಿದ್ದರು. ಹೀಗಾಗಿ ನೊಂದುಕೊಂಡಿರುವ ಶಿಕ್ಷಕರು ಪೈನಲ್ ಆಗಿ ಲೋಕಾಯುಕ್ತ ಪೊಲೀಸರಿಗೆ ಡಿಡಿಪಿಐ ಅಂದಾನಪ್ಪ ವಿರುದ್ಧ ದೂರು ನೀಡಿದ್ದರು.

ನಿವೃತ್ತ ಶಿಕ್ಷಕರೊಬ್ಬರಿಂದ 7 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿಬಿ ದ್ದಿದ್ದಾರೆ. ಅಲ್ಲದೇ ಅವರಿಗೆ ಸಹಕರಿಸಿದಂತ ಎಫ್ ಡಿಎ ದತ್ತಾತ್ರೇಯ ಕುಂಟೆ ಕೂಡಾ ಅವರನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.

ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇಬ್ಬರನ್ನು ವಶಕ್ಕೆ ತಗೆದುಕೊಂಡು ತನಿಖೆಯನ್ನು ಮುಂದುವರೆಸಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..


Google News

 

 

WhatsApp Group Join Now
Telegram Group Join Now
Suddi Sante Desk