ಮೈಸೂರು –
ಲೋಕಾಯುಕ್ತ ಬಲೆಗೆ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ಬಿದ್ದ ಘಟನೆ ಮೈಸೂರಿ ನಲ್ಲಿ ನಡೆದಿದೆ ಹೌದು ಮೈಸೂರಿನ ತಿಲಕ್ ನಗರ ಕಚೇರಿ ಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿ ದ್ದಾರೆ ಲೋಕೇಶ್ ಎಂಬ ಅಧಿಕಾರಿ.
ಅಂಗಡಿ ಲೈಸೆನ್ಸ್ ರಿನವಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ರಘು ಬಳಿ 7 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದರು ಲೋಕೇಶ್.
ಇದೇ ವೇಳೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿಯಾಗಿದೆ.ಲೋಕಾಯುಕ್ತ ಎಸ್. ಪಿ ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ಈ ಒಂದು ದಾಳಿಯಾಗಿದೆ.
ಕಚೇರಿ ಯಲ್ಲಿದ್ದಾಗಲೇ ಟ್ರ್ಯಾಪ್ ಮಾಡಿದ್ದಾರೆ ಲೋಕಾಯುಕ್ತ ಅಧಿಕಾರಿಗಳು.
2015ರಲ್ಲು ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು.ಇದೀಗ ಎರಡನೇ ಬಾರಿ ಮತ್ತೇ ಲಂಚ ಪಡೆದು ಸಿಕ್ಕಿಬಿದ್ದಿದ್ದಾರೆ ಲೋಕೇಶ್.ಸಧ್ಯ ವಶಕ್ಕೆ ತೆಗೆದುಕೊಂಡಿರುವ ಲೋಕಾ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮೈಸೂರು…..