ಬೆಂಗಳೂರು –
ಬೆಂಗಳೂರಿನಲ್ಲಿ ಯಾವುದೇ ಶಾಲಾ ಕಾಜೇ ಜುಗಳಿಗೆ ರಜೆಯಿಲ್ಲ ಎಂದು ಡಿಸಿ ದಯಾನಂದ್ ಹೇಳಿದರು ನಗರದಲ್ಲಿನ ಕೆಲ ಶಾಲೆಗಳಿಗೆ ಬಾಂಬ್ ಕರೆ ಕುರಿತು ಗೊಂದಲ ಉಂಟಾಗಿತ್ತು ಇದು ಒಂದು ಹುಸಿ ಬಾಂಬ್ ಕರೆಯಾಗಿದೆ ಈ ಒಂದು ವಿಚಾರ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ ಎಂದರು.
ನಗರದ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಮಕ್ಕಳ ಸುರಕ್ಷ ತೆಯ ಸಲುವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು ಆದರೆ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬೆಂಗಳೂರಿನ 60 ಶಾಲೆಗಳಿಗೆ ಬಾಂಬ್ ಬೆದರಿ ಕೆಯ ಇ-ಮೇಲ್ ಸಂದೇಶ ಬಂದಿತ್ತು. ಈ ಕಾರಣ ದಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡ ಲಾಗಿತ್ತು ಎಂದರು. ಬಾಂಬ್ ಬೆದರಿಕೆ ಇ-ಮೇಲ್ ಕಾರಣ ನಗರದ ಶಾಲಾ-ಕಾಲೇಜುಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ
ಸಾಕಷ್ಟು ಕ್ರಮಗಳನ್ನು ಕೂಡಾ ಕೈಗೊಂಡಿದ್ದಾರೆ. ಬೆದರಿಕೆ ಸಂದೇಶದಲ್ಲಿ ಯಾವುದೇ ಗಂಭೀರತೆ ಕಾಣುತ್ತಿಲ್ಲ ಆದ್ದರಿಂದ ಬೆಂಗಳೂರಿನ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..