ಚಿತ್ರದುರ್ಗ –
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಹಿರಿಯೂರು ಘಟಕ ಉದ್ಘಾಟನೆ – ಹಿರಿಯೂರು ತಾಲ್ಲೂಕ ಘಟಕ ಉದ್ಘಾಟನೆಗೆ ಸಾಕ್ಷಿಯಾದ್ರು ಸಂಘಟನೆಯ ಟೀಮ್ ಇಲಾಖೆ ಯ ಅಧಿಕಾರಿಗಳು ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮ ಹೌದು
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತಮ್ಮ ವ್ಯಾಪ್ತಿಯನ್ನು ರಾಜ್ಯಾಧ್ಯಂತ ವಿಸ್ತರಣಯನ್ನು ಮಾಡುತ್ತಿದ್ದು ಚಿತ್ರದುರ್ಗದಲ್ಲಿ ಮತ್ತೊಂದು ತಾಲ್ಲೂಕು ಘಟಕವನ್ನು ಆರಂಭ ಮಾಡಲಾಗಿದೆ.ಹೌದು ಜಿಲ್ಲೆಯ ಹಿರಿಯೂರು ತಾಲ್ಲೂಕು ಘಟಕವನ್ನು ರಚನೆ ಮಾಡಲಾಗಿದೆ
ನೂತನ ಈ ಒಂದು ತಾಲ್ಲೂಕು ಘಟಕವನ್ನು ಉದ್ಘಾಟನೆ ಮಾಡಲಾಯಿತು.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಒಂದು ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು.ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ ಡಾ.ಲತಾ.ಎಸ್ ಮುಳ್ಳೂರ ರಾಷ್ಟ್ರ ಹಾಗೂ ರಾಜ್ಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ ಶ್ರೀಮತಿ ರಾಜಶ್ರೀ.ಸಜ್ಜೆಶ್ವರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷ ರು ಹಾಗೂ ಜ್ಯೋತಿಬಾ ಫುಲೆ ಅಧ್ಯಯನ ಕೇಂದ್ರದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶೈಕ್ಷಣಿಕ ಕಾರ್ಯಾಗಾರ ಸರಕಾರಿ ಶಾಲಾ ಗುಣಮಟ್ಟದಲ್ಲಿ SdMC ಹಾಗೂ ಪೋಷಕರ ಪಾತ್ರ ಕುರಿತು ಉಪನ್ಯಾಸ ನೆರವೇರಿತು.ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಜ್ನ್ಯಾ ವಿಧಿ ಬೋಧನೆ ಕೂಡಾ ನೆರವೇರಿತು.ಮಕ್ಕಳಿಂದ ನೃತ್ಯಗಳು ಹಾಗೂ ಸಾವಿತ್ರಿಬಾಯಿ ಫುಲೆ ಅವರ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕು ಘಟಕದಿಂದ ಸಲ್ಲಿಸ ಲಾಯಿತು.
ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ……