ಕಂದಾಯ ಸಚಿವರ ಹೆಸರಿನಲ್ಲಿ ಹಣ ವಸೂಲಿ – ಸಿಡಿದೆದ್ದ ಸರ್ಕಾರಿ ಅಧಿಕಾರಿ – ದೂರು ದಾಖಲು

Suddi Sante Desk

ಶೃಂಗೇರಿ –

ಕಂದಾಯ ಸಚಿವ ಆರ್ ಅಶೋಕ್ ಹೆಸರಿನಲ್ಲಿ ಹಣ ವಸೂಲಿ ಆರೋಪವೊಂದು ಕೇಳಿ ಬಂದಿದೆ‌.ಇದು ಸಚಿವರ ಆಪ್ತ ಸಹಾಯಕರ ಮೇಲೆ ಕೇಳಿ ಬಂದಿದ್ದು ದೂರು ದಾಖಲಾಗಿದೆ ಸರ್ಕಾರಿ ಅಧಿಕಾರಿಯಿಂದಲೇ .

ಹೌದು ಕಂದಾಯ ಸಚಿವ ಆರ್ ಅಶೋಕ ತಮ್ಮ ಆಪ್ತ ಸಹಾಯಕರ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆಂದು ಸರ್ಕಾರಿ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ. ಅಲ್ಲದೇ ಸಚಿವರ ಹೆಸರಿನಲ್ಲಿ ಹಣ ಕೇಳಿದ ಆರೋಪದ ಮೇಲೆ ಸಚಿವರ ಆಪ್ತ ಕಾರ್ಯದರ್ಶಿ ಮೇಲೆ ಈಗ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಉಪ ನೋಂದಣಾಧಿಕಾರಿ ಚೆಲುವರಾಜ್

ಹೌದು ಸಚಿವ ಆರ್ ಅಶೋಕ್ ಆಪ್ತ ಸಹಾಯಕರ ಮೇಲೆ ಈಗ ಲಂಚ ಕೇಳಿದ ಆರೋಪವೊಂದು ಕೇಳಿ ಬಂದಿದೆ. ಇದನ್ನು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಆರೋಪ ಮಾಡಿದ್ದಾರೆ. ಜನೇವರಿ 20ನೇ ತಾರೀಖು ವಾಟ್ಸಾಪ್ ಮೂಲಕ ಸಚಿವರ ವೇಳಾಪಟ್ಟಿ ಬಂದಿತ್ತು. 24ನೇ ತಾರೀಖು ಸಚಿವರು ಬರ್ತಾರೆ ಬನ್ನಿ ಎಂದು ಕರೆ ಮಾಡಿದ್ರು 24 ನೇ ತಾರೀಖು ಬೆಳಗ್ಗೆ 10.30ಕ್ಕೆ ಫೋನ್ ಮಾಡಿ ಸಂಜೆ ಸಿಗಲು ಹೇಳಿದ್ರು ನಾನು ಸಂಜೆ 6 ಗಂಟೆಗೆ ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ ಅವರು 7.30ಕ್ಕೆ ಬಂದ್ರು ಅಲ್ಲೇ ಇದ್ದ ರೂಮಿಗೆ ಕರೆದುಕೊಂಡು ಹೋದ್ರು ಅವರು ಯಾರೆಂದು ಗೊತ್ತಿರಲಿಲ್ಲ ನಾನು ಮೊದಲೇ ಪೊಲೀಸರಿಗೆ ಅವರನ್ನ ತೋರಿಸಲು ಕೇಳಿದ್ದೆ ಪೊಲೀಸರು ಇವರೇ ಕಂದಾಯ ಸಚಿವರ ಪಿಎ ಗಂಗಾಧರ ಎಂದು ಹೇಳಿದ್ರು .

ಆರ್ ಅಶೋಕ್ ಆಪ್ತ ಸಹಾಯಕ ಗಂಗಾಧರ್

ಇವರು ಪಕ್ಕದ ರೂಮಿಗೆ ಹೋದ ಕೂಡಲೇ ಏನಿದೆ ಕೊಡಿ ಎಂದರು ನಾನು ನೇರವಾಗಿ ಹೇಳಿದೆ ನಾನು ಕೊಡೋದಿಲ್ಲ, ತಗಳೋದು ಇಲ್ಲ ಎಂದು ನೇರವಾಗಿ ಹೇಳಿದೆ ಆಮೇಲೆ ಆಯ್ತು ಹೋಗಿ ಎಂದರು.

ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ರು ಕರ್ನಾಟಕ ಸೆಕ್ರಟರಿಗೆ ಕಂಪ್ಲೇಟ್ ಮಾಡಿದ್ದೇನೆ ಈ ಲೆಟರ್ ಸಚಿವರಿಗೆ ಕೊಡಿ ಎಂದೇ ಅದನ್ನ ನೀವೇ ಕೊಟ್ಟಿಕೊಳ್ಳಿ ಎಂದು ಹೇಳಿ ಹೋದರು.ಮತ್ತೆ ರಾತ್ರಿ ವಾಟ್ಸಾಪ್ ಕಾಲ್ ಬಂದಿತ್ತು, ನಾನು ನೋಡಿರಲಿಲ್ಲ ಇವತ್ತು ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ ಫೈಲ್ ಕೊಡಲಿಲ್ಲ ಎಂದರು.

ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರು ನಾನು ಕೊಡಲಿಲ್ಲ ಎಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಡ್ರಾಫ್ಟ್ ರೆಡಿ ಮಾಡುತ್ತಿದ್ದೇನೆ ಸಚಿವರ ಹೆಸರಿನಲ್ಲಿ ಹಣ ಕೇಳುವ ಕೆಲಸವಾಗ್ತಿದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.ಸಧ್ಯ ಕಂದಾಯ ಸಚಿವ ಆರ್.ಅಶೋಕ್ ಪಿಎ ವಿರುದ್ಧ ದೂರು ದಾಖಲಾಗಿದೆ.

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಚೆಲುವರಾಜ್ ದೂರನ್ನು ದಾಖಲು ಮಾಡಿದ್ದಾರೆ.

ಶೃಂಗೇರಿ ಸಬ್ ರಿಜಿಸ್ಟ್ರಾರ್ ಆಗಿರುವ ಚೆಲುವರಾಜ್ ಅವರು ಸಚಿವರ ಆಪ್ತ ಸಹಾಯಕರ ಮೇಲೆ ದಾಖಲು ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ. ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಹಾಗೇ ನನಗೆ ಅವರಿಂದ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ತನಗೂ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ ಚೆಲುವರಾಜ್. ಇದೇ 24ರಂದು ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ ಸಚಿವ ಆರ್ ಅಶೋಕ್ ಈ ವೇಳೆ ಅಶೋಕ್ ಪಿಎ ಸಬ್ ರಿಜಿಸ್ಟ್ರಾರ್ ರಿಂದ ಹಣ ಕೇಳಿರುವ ಆರೋಪ.

ಸಚಿವ ಆರ್ ಅಶೋಕ್ ಪಿಎ ಗಂಗಾಧರ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದು ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ನೀಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.