ಬೀದರ್ –
ಹೊಸ ಪಿಂಚಣಿ ಯೋಜನೆಯನ್ನು (ಎನ್‍ಪಿಎಸ್) ರದ್ದುಪಡಿಸಲು ಸಚಿವ ಸಂಪುಟ ಸಭೆಯಲ್ಲಿ ಒತ್ತಡ ತರಬೇಕೆಂದು ಎನ್.ಪಿ.ಎಸ್. ನೌಕರರ ಸಂಘದವರು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರನ್ನು ಒತ್ತಾಯಿಸಿದ್ದಾರೆ. ಹೌದು ಈ ಒಂದು ವಿಚಾರ ಕುರಿತು ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಎನ್‍ಪಿಎಸ್ ರದ್ದತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವೆ ಎಂದು ಸಚಿವರು ನೌಕರರಿಗೆ ಭರವಸೆಯನ್ನು ನೀಡಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಮಹಿಮಾಕರ್, ಉಪಾಧ್ಯಕ್ಷರಾದ ರಾಜಕುಮಾರ ಕರುಣಾಸಾಗರ, ಸಂತೋಷ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾಡೆ ಇತರರಿದ್ದರು.
ಸುದ್ದಿ ಸಂತೆ ನ್ಯೂಸ್ ಬೀದರ್…..