ಬಾಗಲಕೋಟೆ –
ಲೋಕಾಯುಕ್ತ ಬಲೆಗೆ ಆಹಾರ ಇಲಾಖೆಯ ಅಧಿಕಾರಿ ಯೊಬ್ಬರು ಬಿದ್ದ ಘಟನೆ ಬಾಗಲ ಕೋಟೆ ಯಲ್ಲಿ ನಡೆದಿದೆ ಹೌದು ಇಲಾಖೆ ನಿರೀಕ್ಷಕ ಈರಯ್ಯ ಕೋಟಿ ಟ್ರ್ಯಾಪ್ ಆಗಿರುವ ಸರ್ಕಾರಿ ಅಧಿಕಾರಿ ಯಾಗಿದ್ದಾರೆ.
ಅಮಾನತುಕೊಂಡ ಪಡಿತರ ಅಂಗಡಿ ಪರವಾಗಿ ಮುಂದುವರಿಕೆಗೆ ಲಂಚದ ಬೇಡಿಕೆಯನ್ನು ಇಟ್ಟಿ ದ್ದರು.ಲಂಚ ಪಡೆಯುವ ವೇಳೆ ದಾಳಿ ಮಾಡಿದ ಲೋಕಾಯುಕ್ತರು.60 ಸಾವಿರ ಲಂಚದ ಹಣ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಆಹಾರ ವಿಭಾಗದ ನಿರೀಕ್ಷಕ ಈರಯ್ಯ ಕೋಟಿ, ಸಿಬ್ಬಂದಿ ಮಲ್ಲಿಕಾರ್ಜುನ ಹಾವರಗಿ ಲೋಕಾ ಬಲೆಗೆ ಬಿದ್ದವರಾಗಿದ್ದು ಬಾಗಲಕೋಟೆ ತಹಶಿಲ್ದಾರರ ಕಚೇರಿಯಲ್ಲಿ ನಡೆದ ದಾಳಿ ಯಲ್ಲಿ ಇಬ್ಬರು ಟ್ರ್ಯಾಪ್ ಆಗಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಎನ್. ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದ್ದು ಸುರೇಂದ್ರ ಗಡಗಡೆ ಎಂಬುವರು ಲೋಕಾ ಯುಕ್ತಕ್ಕೆ ದೂರು ನೀಡಿದ್ದರು.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..