PUC ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

Suddi Sante Desk

ಬೆಂಗಳೂರು –

SSLC ಪರೀಕ್ಷಾ ಬೆನ್ನಲ್ಲೇ ಈಗ PUC ಪರೀಕ್ಷೆಯ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ ಸಚಿವ ಸುರೇಶ್ ಕುಮಾರ್ ಅವರು, ಮೇ 24 ರಿಂದ ಜೂನ್ 10ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

ಪರೀಕ್ಷಾ ವೇಳಾಪಟ್ಟಿ

ಮೇ 24 ರಂದು ಭೌತಶಾಸ್ತ್ರ, ಇತಿಹಾಸ
ಮೇ 25 ರಂದು ಮೈನಾರಿಟಿ ಲ್ಯಾಂಗ್ವೇಜಸ್
ಮೇ 26 ರಂದು ಮೂಲ ಗಣಿತ, ಲಾಜಿಕ್ ಹೋಮ್ ಸೈನ್ಸ್
ಮೇ 27 ರಂದು ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ
ಮೇ 28 ರಂದು ಉರ್ದು
ಮೇ 29 ರಂದು ರಾಜ್ಯಶಾಸ್ತ್ರ
ಮೇ 31 ರಂದು ರಸಾಯನ ಶಾಸ್ತ್ರ
ಜೂನ್ 1 ರಂದು ಕರ್ನಾಟಕ ಸಂಗೀತ
ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಜೂನ್ 3 ರಂದು ಹಿಂದಿ
ಜೂನ್ 4 ರಂದು ಅರ್ಥಶಾಸ್ತ್ರ
ಜೂನ್ 5 ರಂದು ಕನ್ನಡ(ಪ್ರಥಮ ಭಾಷೆ)
ಜೂನ್ 7 ರಂದು ಇಂಗ್ಲಿಷ್ (ದ್ವಿತೀಯ ಭಾಷೆ)
ಜೂನ್ 10 ರಂದು ಭೂಗೋಳಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.