ನವದೆಹಲಿ –
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ತನ್ನ ಗೆಲುವಿನ ನಾಗಾಲೋಟ ವನ್ನು ಮುಂದುವರೆಸಿದೆ. ಅದು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ತವರು ರಾಜ್ಯ ಗುಜರಾತ್ ನಿಂದಲೇ ಆರಂಭವಾಗಿದೆ.ಹೌದು ಸೂರತ್ ನಲ್ಲಿ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಕಾರಣ ಬಿಜೆಪಿ ಗೆಲುವು ನಿಶ್ಚಿತವಾಗಿದೆ
ಫಲಿತಾಂಶಕ್ಕೂ ಮುನ್ನ ಬಿಜೆಪಿಗೆ ಬಹುದೊಡ್ಡ ಬೂಸ್ಟರ್ ಸಿಕ್ಕಂತಾಗಿದೆ.ಅದರಂತೆ, ಮಧ್ಯ ಪ್ರದೇಶ, ಒಡಿಶಾ, ರಾಜ್ಯಕ್ಕೂ ಗೆಲುವಿನ ಯಾನ ಹಬ್ಬಿದೆ.ಇಂದೋರ್ ಮತ್ತು ಒಡಿಶಾದ ಪುರಿ ಕ್ಷೇತ್ರಗಳು ಬಿಜೆಪಿ ಪಾಲಾಗಿದೆ.
ಒಡಿಶಾದ ಪುರಿ ಲೋಕಸಭಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದ್ರೆ ಆ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ದುಡ್ಡಿಲ್ಲ ಎಂದು ಹೇಳಿ ನಾಮಪತ್ರ ಹಿಂಪಡೆದಿದ್ದಾರೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಿಡೀರನೇ ನಾಮಪತ್ರ ಹಿಂಪಡೆದು ಕೈ ಹೈಕಮಾಂಡ್‌ಗೆ ಶಾಕ್ ಕೊಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ……