ದೆಹಲಿ –
ಹೀಗೊಂದು ಬೆತ್ತಲೆಯ ಟೂರ್ ಪ್ಯಾಕೇಜ್ ಧೂಳೆಬ್ಬಿಸಿದೆ ಬೆತ್ತಲೆಯ ವಿಚಿತ್ರವಾದ ಟೂರ್ ಪ್ಯಾಕೇಜ್ ಆಫರ್…..ನೀವು ಹೋಗಬೇಕೆಂದರೆ ಕೆಲವು ಷರತ್ತುಗಳನ್ನು ಪಾಲಿಸಬೇಕು
ಬದಲಾದ ಕಾಲ ಮಾನದಲ್ಲಿ ಏನೇಲ್ಲಾ ನಡೆ ಯುತ್ತವೆ ಎಂಬೊದಕ್ಕೆ ಇಲ್ಲೊಂದು ಟ್ರಾವೆಲ್ ಕಂಪನಿಯೊಂದು ಘೋಷಣೆ ಮಾಡಿರುವ ಟೂರ್ ಪ್ಯಾಕೇಜ್ ಸಾಕ್ಷಿ.ಹೌದು ನಮ್ಮ ನಡುವೆ ಇತ್ತೀಚೆಗೆ ಏನೇನೋ ವಿಚಿತ್ರವಾದ ಸಂಗತಿಗಳು ಆಚರಣೆಗಳು ಉತ್ಸವಗಳು,ಪಾರ್ಟಿಗಳು ನಡೆ ಯುತ್ತಿವೆ ಇದರ ನಡುವೆ ಇಲ್ಲಿ ವರ್ಷಕ್ಕೊಮ್ಮೆ ಬೆತ್ತಲೆ ಉತ್ಸವವೊಂದು ನಡೆಯುತ್ತೆ ಅಂತ ನಾವು ಕೇಳಿದ್ದೇವೆ
ಆದರೆ ಇದನ್ನು ಸಧ್ಯ ಪ್ಯಾಕೇಜ್ ರೂಪದಲ್ಲಿ ಘೋಷಣೆಯನ್ನು ಕೂಡಾ ಮಾಡಲಾಗಿದ್ದು ಆಫರ್ ನೀಡಲಾಗಿದೆ.ಹೌದು ಈ ಉತ್ಸವದಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ ಟ್ರಾವೆಲ್ ಕಂಪನಿಯೊಂದು ವಿಚಿತ್ರವಾದ ಈ ಒಂದು ಟೂರ್ ಪ್ಯಾಕೇಜ್ ನ್ನು ಘೋಷಣೆ ಮಾಡಿ ಆಫರ್ ನೀಡಿದೆ.
11 ದಿನಗಳ ಕಾಲ ಬೋಟ್ ಪ್ರಯಾಣದ ಪ್ಯಾಕೇಜ್ ಘೋಷಣೆ ಮಾಡಿದ್ದು ಇದರಲ್ಲಿ ಪ್ರಯಾಣ ಮಾಡಬಯಸುವವರು ಕಡ್ಡಾಯ ವಾಗಿ ಬೆತ್ತಲೆಯಾಗಿ ಬರಬೇಕು 11 ದಿನಗಳ ಕಾಲ ಬೆತ್ತಲೆಯಾಗಿಯೇ ಪ್ರಯಾಣ ಮಾಡಬೇಕು ಎಂದು ಕಂಡೀಷನ್ ಇಡಲಾಗಿದೆ ಇದೊಂದು ವಿಚಿತ್ರ ಟೂರ್ ಪ್ಯಾಕೇಜ್ ಆದರೂ ಈ ಟೂರ್‌ಗೆ ಹೋಗಲು ಜನರು ಮುಗಿ ಬೀಳುತ್ತಿದ್ದು ಈಗಾಗಲೇ ನೊಂದಣಿಯನ್ನು ಕೂಡಾ ಮಾಡಿ ಕೊಂಡಿದ್ದಾರಂತೆ.
ಬೇರ್ ನೆಸಸಿಟಿ ಅನ್ನೋ ಟ್ರಾವೆಲ್ ಕಂಪನಿ ಇಂತಹದ್ದೊಂದು ಬೆತ್ತಲೇ ಬೋಟ್ ಪ್ರಯಾಣ ವನ್ನು ಆಯೋಜನೆ ಮಾಡಿದೆ 968 ಅಡಿಯ ನಾರ್ವೆಯನ್ ಪರ್ಲ್ ಬೋಟ್‌ನಲ್ಲಿ ಈ ಪ್ರಯಾಣವನ್ನು ಆಯೋಜಿಸಲಾಗಿದೆ ಅಮೆರಿಕಾದ ಕರಾವಳಿ ಭಾಗವಾಗಿರುವ ಮಿಯಾಮಿಯಿಂದ ಕೆರಿಬಿಯನ್ ಐಸ್‌ಲ್ಯಾಂಡ್ ಗೆ ಈ ಬೋಟು ಪ್ರವಾಸ ತೆರಳಲಿದೆ.
ಈ ಪ್ರವಾಸದಲ್ಲಿ ಯಾರು ಬೇಕಾದರೂ ಭಾಗಿ ಯಾಗಬಹದು ಆದ್ರೆ ಬೆತ್ತಲೆಯಾಗಿ ಬರಬೇಕು ಅಷ್ಟೇ ಗುಂಪಾಗಿ ಜೋಡಿಯಾಗಿ, ಏಕಾಂಗಿಯಾ ಗಿಯೂ ಬಂದು ಈ ಪ್ರವಾಸದಲ್ಲಿ ಭಾಗಿಯಾಗ ಬಹುದು 11 ದಿನವೂ ಎಲ್ಲರೂ ಬೆತ್ತಲೆಯಾಗಿದ್ದು ಸಮುದ್ರಯಾನವನ್ನು ಎಂಜಾಯ್ ಮಾಡಲಿ ದ್ದಾರೆ ಎಂದು ಟೂರ್ ಆಯೋಜಿಸಿರುವ ಕಂಪನಿ ತಿಳಿಸಿದೆ.
ಬೇರ್ ನೆಸಸಿಟಿ ಜೊತೆ ನಾರ್ವೆಯನ್ ಕ್ರೂಸ್ ಶಿಪ್ ಪಾಲುದಾರಿಕೆ ಮಾಡಿಕೊಂಡಿದೆ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ನೈಸರ್ಗಿಕವಾ ಗಿಯೇ ಆಸ್ವಾದಿಸುವಂತೆ ಮಾಡುವುದಕ್ಕಾಗಿ ಈ ಬೆತ್ತಲೇ ಪ್ರವಾಸ ಹಮ್ಮಿಕೊಂಡಿದ್ದೇವೆ ಎಂದು ಟೂರ್ ಪ್ಲಾನರ್ಸ್ ಹೇಳಿದ್ದಾರೆ ಈ 11 ದಿನಗಳಲ್ಲಿ ಕೆಲ ಖಾಸಗಿ ದ್ವೀಪ ಖಾಸಗಿ ಬೀಚ್ ರೆಸಾರ್ಟ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡ ಲಾಗುತ್ತದೆ.
ಎಲ್ಲಿಗೇ ಹೋದರೂ ಈ ಬೋಟ್ ಪ್ರವಾಸಿಗರು ಬೆತ್ತಲೆಯಾಗಿಯೇ ಇರಬೇಕೆಂಬ ನಿಯಮ ಗಳನ್ನು ವಿಧಿಸಲಾಗಿದೆ.11 ದಿನಗಳ ಪ್ರವಾಸದ ಸಂದರ್ಭದಲ್ಲಿ ಕೆಲ ಚಟುವಟಿಕೆಗಳು ನಡೆಯು ತ್ತವೆ,ಕೆರಿಬಿಯನ್ ಪಾರ್ಟಿ,ಮ್ಯೂಸಿಕ್ ಮಸ್ತಿ ಕೂಡಾ ಇರುತ್ತದೆ. ಹಲವಾರು ಮನರಂಜನೆ ಕಾರ್ಯಕ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗಿದೆ
ಅತ್ಯಂತ ಐಷಾರಾಮಿ ಪ್ರವಾಸದಲ್ಲಿ ಪಾಲ್ಗೊ ಳ್ಳುವ ನಿಮಗೆ ಅಷ್ಟೇ ಲಕ್ಷುರಿ ಆತಿಥ್ಯ ನೀಡ ಲಿದ್ದೇವೆ ಎಂದು ಟೂರ್ ಪ್ಲಾನರ್ಸ್ ಹೇಳಿ ಕೊಂಡಿದ್ದಾರೆ ನ್ಯೂಡ್ ಬೋಟ್ ಪ್ರಯಾಣದ ಮೂಲಕ ನಿತ್ಯ ಆತಿಥ್ಯ, ಆಹಾರ, ಐತಿಹಾಸಿಕ ಸ್ಥಳ, ಪ್ರಕೃತಿ ಸೌಂದರ್ಯ ಆಸ್ವಾದಿಸಿ ಎಂದು ಬೇರ್ ನೆಸೆಸಿಟಿ ಟ್ರಾವೆಲ್ ಕಂಪನಿ ಮನವಿ ಮಾಡಿದೆ.ಈ ಪ್ರವಾಸಕ್ಕೆ ಸಿದ್ದಗೊಂಡಿರುವ ಬೋಟ್‌ಗೆ ದಿ ಬಿಗ್ ನ್ಯೂಡ್ ಬೋಟ್ ಜರ್ನಿ ಎಂದು ಹೆಸರಿಡಲಾಗಿದೆ.
ಬುಕಿಂಗ್ ನಡೆಯುತ್ತಿದ್ದು ಕೆಲವೇ ಮಂದಿಗೆ ಮಾತ್ರ ಅವಕಾಶ ಬಾಕಿ ಉಳಿದಿದೆ.ಈ 11 ದಿನಗಳ ಪ್ರವಾಸ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಬೇರ್ ನೆಸಸಿಟಿ ಹೇಳಿದೆ.
ಸುದ್ದಿ ಸಂತೆ ನ್ಯೂಸ್ ದೆಹಲಿ…..