ನವದೆಹಲಿ –
NPS ರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಂಡ ರಾಜ್ಯದ NPS ನೌಕರರ ಟೀಮ್ – ರಾಜ್ಯಾಧ್ಯಕ್ಷ ನಾಗನಗೌಡ ನೇತ್ರತ್ವ ದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ರಾಜ್ಯದ ನೌಕರರ ನಿಯೋಗ…..ರಾಷ್ಟ್ರೀಯ ಅಧ್ಯಕ್ಷರೊಂದಿಗೆ ನಡೆಯಲಿದೆ ಸಭೆ ಪೈನಲ್ ಆಗಲಿದೆ ಮುಂದಿನ ಹೋರಾಟದ ಪ್ಲಾನ್
ಸರ್ಕಾರಿ ನೌಕರರು ಬಹು ದಿನಗಳಿಂದ ನಿರೀಕ್ಷೆಯನ್ನು ಮಾಡುತ್ತಿರುವ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಕುರಿತಂತೆ ಹೋರಾಟಗಳು ಒತ್ತಾಯಗಳು ನಡೆಯುತ್ತಲೆ ಇವೆ.ಇದರ ನಡುವೆ ಈ ಒಂದು ವಿಚಾರ ಕುರಿತಂತೆ ನವಹೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಬಿ ಪಿ ಸಿಂಗ್ ರಾವತ್ ನೇತ್ರತ್ವದಲ್ಲಿ ಸಭೆ ನಡೆಯಲಿದೆ.
ದೇಶದ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರೊಂದಿಗೆ ರಾಷ್ಟ್ರೀಯ ಅಧ್ಯಕ್ಷರು ಈ ಒಂದು ಸಭೆಯನ್ನು ಕರೆದಿದ್ದು ಪ್ರಮುಖವಾಗಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಕುರಿತಂತೆ ಮತ್ತು ಹೋರಾಟದ ಕುರಿತಂತೆ ಈ ಒಂದು ಸಭೆಯನ್ನು ಕರೆಯಲಾಗಿದ್ದು ಚರ್ಚೆಯೊಂದಿಗೆ ಮುಂದೆ ಏನು ಮಾಡಬೇಕು ಹೋರಾಟದ ಕುರಿತಂತೆ ಚರ್ಚೆ ಮಹತ್ವದ ಮಾತುಕತೆ ನಡೆಯಲಿದೆ.
ಕರ್ನಾಟಕದಿಂದ ನಾಲ್ವರು ನೌಕರರು ಈ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ರಾಜ್ಯ ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ನಾಗನಗೌಡ ಎಂ,ಎ ಇವರ ನೇತ್ರತ್ವದಲ್ಲಿ ನಾಲ್ವರು ನೌಕರರು ಪಾಲ್ಗೊಂಡಿದ್ದು ಇವರೊಂದಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ,ರಾಜ್ಯ ಉಪಾಧ್ಯಕ್ಷ ರಾಗಿರುವ ನಾರಾಯಣಸ್ವಾಮಿ
ಪೃಥ್ವಿಕುಮಾರ ನೌಕರರ ಟೀಮ್ ದೆಹಲಿಯಲ್ಲಿನ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದು ಹಳೆ ಪಿಂಚಣಿ ಯೋಜನೆ ಕುರಿತಂತೆ ಚರ್ಚೆಯೊಂದಿಗೆ ಮುಂದಿನ ಹೋರಾಟದ ರೂಪ ರೇಷೆಗಳ ಕುರಿತಂತೆ ಅಂತಿಮವಾದ ನಿರ್ಧಾರ ಪೈನಲ್ ಆಗಲಿದೆ.
ಇನ್ನೂ ರಾಜ್ಯದಿಂದ ದೆಹಲಿಗೆ ಪ್ರಯಾಣವನ್ನು ಬೆಳೆಸಿರುವ ಈ ಒಂದು ನೌಕರರ ನಿಯೋಗಕ್ಕೆ ಶುಭವಾಗಲಿ ಸುಖಕರ ಪ್ರಯಾಣದೊಂದಿಗೆ OPS ನಿರೀಕ್ಷೆಯಲ್ಲಿರುವ ನೌಕರರಿಗೆ ಸಿಗಲಿ ಸಿಹಿ ಸುದ್ದಿ ಸಿಗಲಿ ಎಂಬ ಶುಭಹಾರೈಕೆಗಳನ್ನು ರಾಜ್ಯದ ಸಮಸ್ತ ನೌಕರರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..