ಕುರಗೋಡು –
ಕುರುಗೋಡು ನಲ್ಲಿ ಪೊಲೀಸ್ ಇಲಾಖೆಯಿಂದ ವಿಶೇಷವಾಗಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಜಯಂತಿ ಆಚರಣೆ – ಪೊಲೀಸ್ ಇನ್ಸ್ಪೆಕರ್ ವಿಶ್ವವಾಥ ಹಿರೇಗೌಡರ ನೇತ್ರತ್ವದಲ್ಲಿ ನಡೆಯಿತು ವಿಶೇಷವಾದ ಅರ್ಥಪೂರ್ಣ ಕಾರ್ಯ ಕ್ರಮಗಳು…..ವಿವಿಧ ಸಂಘಟನೆಗಳು ಸಾಥ್
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಬಳ್ಳಾರಿ ಜಿಲ್ಲೆಯ ಕುರಗೋಡು ನಲ್ಲೂ ಆಚರಣೆ ಮಾಡಲಾಯಿತು. ಯಾವುದೇ ಒಂದು ವೇದಿಕೆ ಕಾರ್ಯಕ್ರಮ ಮೆರವಣಿಗೆ ಮಾಡದೇ ವಿಶೇಷವಾಗಿ ಅರ್ಥಪೂರ್ಣವಾಗಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾ ಯಿತು.
ಹೌದು ಪಟ್ಟಣದ ಎಸ್ ಎಲ್ ವಿ ಫಂಕ್ಷನ್ ಸಭಾಭವನ ದಲ್ಲಿ ಕುರುಗೋಡಿನ ತಾಲೂಕು ಆಡಳಿತ ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರ ಯದಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು.ಭಾರತ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲಿ ಕುರುಗೋಡು ಪಟ್ಟಣದಲ್ಲಿ ಪ್ರಥಮ ಬಾರಿಗೆ ಮಹಾ ಚೇತನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬದುಕು,ಬರಹ ಕುರಿತಾದ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮವನ್ನು ಮುಕ್ತವಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ವಯಸ್ಸಿನ ಮಿತಿಯಿಲ್ಲದೇ ಹಲವರು ಪಾಲ್ಗೊಂಡಿದ್ದು ಕಂಡು ಬಂದಿತು.ವಿಶೇಷವಾಗಿ ಈ ಒಂದು ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಸೆಲೆಬ್ರೇಟಿಗಳ ರೌಂಡ್,ಸೇರಿದಂತೆ ಹಲವಾರು ಸುತ್ತು ಗಳನ್ನು ಮಾಡಿ ಅಂತಿಮವಾಗಿ ವಿಜೇತರಾದ ತಂಡಕ್ಕೆ ಪ್ರಶಸ್ತಿಯೊಂದಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು ಬರಹದ ಜ್ಞಾನ, ನಿಮಗೇಷ್ಟು ಗೊತ್ತು ? ಎಂದು ನೀಡಿದ ಸವಾಲುಗಳಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು
ಈ ಒಂದು ಕಾರ್ಯಕ್ರಮದಲ್ಲಿ ಕಂಡು ಬಂದಿತು ಅಲ್ಲದೇ ಅಷ್ಟೇ ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದು ಕೂಡಾ ಕಂಡು ಬಂದಿತು.ಇನ್ನೂ ಸವಾಲುಗಳಿಗೆ ಜವಾಬುಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ,ವಿವಿಧ ಹಂತ ಗಳಲ್ಲಿ ವಿಜೇತರಾದವರಿಗೆ ಬಹುಮಾನ,ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು
ವಯೋಮಿತಿ ಇಲ್ಲದೇ ಮುಕ್ತವಾಗಿ ಪಾಲ್ಗೊಂಡಿದ್ದು ಕಂಡು ಬಂದಿತು. ಮೈಸೂರು, ಬೆಳಗಾವಿ, ಯಾದಗಿರಿ, ಗಂಗಾವತಿ,ಸಿಂಧನೂರು,ಕಂಪಲಿ,ಬಳ್ಳಾರಿ ಸೇರಿದಂತೆ ಹಲವೆಡೆ ಗಳಿಂದ ಪಾಲ್ಗೊಂಡಿದ್ದು ಕಂಡು ಬಂದಿತು. ಇದರೊಂದಿಗೆ ಈ ಒಂದು ಕಾರ್ಯಕ್ರಮವನ್ನು ಅರ್ಥ. ಪೂರ್ಣವಾಗಿ ಮಾಡಲಾಯಿತು ಕೇವರ ವೇದಿಕೆ ಕಾರ್ಯಕ್ರಮದೊಂದಿಗೆ ಸಂವಿಧಾನ ಶಿಲ್ಪಿಯವರನ್ನು ನೆನೆಯದೇ ಇಂತಹ ಕಾರ್ಯಕ್ರಮದ ಮೂಲಕ ವಿಶೇಷವಾಗಿ ಆಚರಿಸಿದ್ದು ಕಂಡು ಬಂದಿತು.
ಈ ಒಂದು ಕಾರ್ಯಕ್ರಮದಲ್ಲಿ ಶಾಸಕ ಜೆ ಎನ್ ಗಣೇಶ,ಪ್ರಸಾದ್ ಗೋಖಲೆ ಡಿವೈಎಸ್ಪಿ,ಶೇಖರ ಪುರಸಭೆ ಅಧ್ಯಕ್ಷರು,ಇನ್ಸ್ಪೆಕ್ಟರ್ ವಿಶ್ನವಾಥ ಹಿರೇಗೌಡರ, ತಹಶಿಲ್ದಾರ ನರಸಪ್ಪ ಪಿಎಸ್ ಐ ಸುಪ್ರೀತ್ ಮತ್ತು ತಾಲ್ಲೂಕು ಆಡಳಿತ ಶಿಕ್ಷಕರ ಸಂಘದ ಸದಸ್ಯರು ಸಾಹಿತ್ಯ ಪರಿಷತ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತ ರಿದ್ದರು.
ಸುದ್ದಿ ಸಂತೆ ನ್ಯೂಸ್ ಕುರಗೋಡು…..