ಬಳ್ಳಾರಿ –
ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆ ಚರ್ಚ್ ಪಾಸ್ಟರ್ ಮೂಲಕ ಧರ್ಮಭೋಧನೆ ಮಾಡಿಸಿರುವ ಆರೋಪ ವೊಂದು ಬಳ್ಳಾರಿಯ ನಗರದ ಸರ್ಕಾರಿ ಶಾಲೆಯಲ್ಲಿ ಕಂಡು ಬಂದಿತ್ತು ಜಾಯ್ ಡಿಬೋರಾ ಎಂಬ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆಯಲ್ಲಿ ಚರ್ಚ್ ಪಾಸ್ಟರ್ನನ್ನು ಕರೆಯಿಸಿ ಬೈಬಲ್ ಗ್ರಂಥವಿಟ್ಟು ಪ್ರಾರ್ಥನೆ,ಧರ್ಮಭೋಧನೆ ಮಾಡಿಸಿದ್ದರು
ಇದರ ಜೊತೆಗೆ ಮುಖ್ಯಶಿಕ್ಷಕಿ ತನ್ನ ಕುರ್ಚಿಯ ಮೇಲೆ ಪಾಸ್ಟರ್ನನ್ನು ಕೂಡಿಸಿದ್ದರು ಮುಖ್ಯ ಶಿಕ್ಷಕಿಯ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ಚರ್ಚ್ ಪಾಸ್ಟರ್ ಅವರಿಂದ ಧರ್ಮಭೋ ಧನೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ದೂರಿನ ಬೆನ್ನಲ್ಲೇ ಶಿಕ್ಷಕಿಯ ಈ ನಡೆಯ ವಿರುದ್ದ ಶಿಕ್ಷಣ ಸಚಿವರು ಸೇರಿದಂತೆ ಹಲವರಿಗೆ ದೂರು ಸಲ್ಲಿಕೆಯಾಗಿದ್ದು ಈಗ ಡಿಡಿಪಿಐ ನೋಟೀಸ್ ನೀಡಿದ್ದಾರೆ.ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್…..