ಬೆಂಗಳೂರು –
ವಾಯವ್ಯ ಸಾರಿಗೆ ಸಂಸ್ಥೆಯ ಚಾಲಕರ ನೌಕರರ ಮತ್ತು ಸಿಬ್ಬಂದ್ದಿಗಳ ವೇತನ ವಿಚಾರ ಕುರಿತಂತೆ ಸಂಸ್ಥೆಯ ಅಧ್ಯಕ್ಷ ಎಸ್ ವಿ ಪಾಟೀಲ ಮುಖ್ಯಮಂತ್ರಿ ಭೇಟಿಯಾದ್ರು. ಬೆಂಗಳೂರಿನ ಮುಖ್ಯಮಂತ್ರಿ ನಿವಾಸಕ್ಕೇ ಸಾರಿಗೆ ಸಂಸ್ಥೆಯ ಸಚಿವ ಲಕ್ಷ್ಮಣ ಸವದಿಯವರೊಂದಿಗೆ ತೆರಳಿ ಮಾತುಕತೆ ನಡೆಸಿದ್ರು. ಮೊದಲು ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪಗೆ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರು ಸಾರಿಗೆ ಸಚಿವರು ಕೃಷಿ ಸಚಿವರು ಹೇಳಿದರು.

ಕಳೆದ ತಿಂಗಳು ಅದರಲ್ಲೂ ಸಧ್ಯ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸಾರಿಗೆ ಸಂಸ್ಥೆಯ ನೌಕರರಿಗೆ ಸಂಬಳದಲ್ಲಿ ಸಮಸ್ಯೆಯಾಗುತ್ತಿದ್ದು ಅಲ್ಲದೇ ವಿಳಂಬವಾಗುತ್ತಿದೆ. ಹೀಗಾಗಿ ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದುಕೊಂಡ ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಸ್ ವಿ ಪಾಟೀಲ ಸಾರಿಗೆ ಸಚಿವರೊಂದಿಗೆ ಮುಖ್ಯಮಂತ್ರಿ ನಿವಾಸಕ್ಕೇ ತೆರಳಿ ವೇತನ ಕುರಿತಂತೆ ಮಾತುಕತೆ ನಡೆಸಿದ್ರು. ಎರಡು ತಿಂಗಳ ಸಂಬಳಕ್ಕಾಗಿ 634 ಕೋಟಿ ರೂಪಾಯಿ ಅವಶ್ಯಕತೆ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಧ್ಯಕ್ಷರು ಸಚಿವರೊಂದಿಗೆ ಸಿಎಮ್ ಗೆ ಒತ್ತಾಯವನ್ನು ಮಾಡಿದ್ರು.

ಕಳೆದ ಒಂದು ವಾರದಿಂದ ಸಾರಿಗೆ ಸಂಸ್ಥೆಯಲ್ಲಿ ವೇತನ ವಿಚಾರ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೇ ಸಂಸ್ಥೆಯ ಅಧ್ಯಕ್ಷರು ಸಾರಿಗೆ ಸಚಿವರೊಂದಿಗೆ ಮಾಡಿದ್ರು. ಇನ್ನೂ ಅಧ್ಯಕ್ಷರ ಮತ್ತು ಸಾರಿಗೆ ಸಚಿವರ ಮನವಿಗೆ ಸ್ಪಂದಿಸಿದ ನಾಡದೋರೆ ವೇತನಕ್ಕಾಗಿ ಬೇಕಾಗಿರುವ 634 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಒಪ್ಪಿಗೆಯನ್ನು ನೀಡಿದ್ರು. ಇನ್ನೂ ಇದಕ್ಕೂ ಮುನ್ನ ಅಧ್ಯಕ್ಷರು ಮತ್ತು ಸಾರಿಗೆ ಸಚಿವರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರೆ ಇಷ್ಟೋತ್ತಿಗಾಗಲೇ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ವೇತನ ಸಾರಿಗೆ ಸಂಸ್ಥೆಯ ನೌಕರರ ಜೇಬಿಗೆ ಸೇರುತ್ತಿತ್ತು.

ಇದರಿಂದ ಹಬ್ಬವನ್ನು ಖುಷಿ ಖುಷಿಯಾಗಿ ನೌಕರರು ಮಾಡುತ್ತಿದ್ದರು. ಆದರೆ ಸಧ್ಯ ಇದ್ಯಾವುದು ಆಗದ ಹಿನ್ನಲೆಯಲ್ಲಿ ದುಬಾರಿಯಾದ ಜೀವನದ ನಡುವೆ ಕೆಲವರು ದೀಪಾವಳಿ ಮಾಡಿದ್ರೆ ಇನ್ನೂ ಕೆಲವರು ಹಬ್ಬ ಮಾಡಿಲ್ಲ.ಒಟ್ಟಾರೆ ಈಗಲಾದರೂ ವಾಯವ್ಯ ಸಾರಿಗೆ ಸಂಸ್ಥೆಯ ನೌಕರರ ವೇತನದ ವಿಚಾರವನ್ನು ಗಂಭೀರವಾಗಿ ತಗೆದುಕೊಂಡಿರುವ ಮುಖ್ಯಮಂತ್ರಿ ಭೇಟಿಯಾಗಿದ್ದು ಸಂಸ್ಥೆಯ ಅಧ್ಯಕ್ಷರ ಮತ್ತು ಸಾರಿಗೆ ಇಲಾಖೆಯ ಸಚಿವರ ಕಾರ್ಯ ಮೆಚ್ಚುವಂತದ್ದು.ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.