ಧಾರವಾಡದಲ್ಲಿ ಕೊಲೆ ಅಣ್ಣನಿಂದ ತಮ್ಮನ ಹತ್ಯೆ

Suddi Sante Desk

ಧಾರವಾಡ –

ಕ್ಷುಲ್ಲಕ ಕಾರಣಕ್ಕೆ ಅಣ್ಣನಿಂದ ತಮ್ಮನ ಕೊಲೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ‌‌. ನಗರದ ಮುರುಘಾಮಠ ಬಳಿಯ ಡಿಪೋ ಸರ್ಕಲ್‌ ಬಳಿ ಈ ಒಂದು ಘಟನೆ ನಡೆದಿದೆ.ಆಕಾಶ ಕೊಟೂರ ಕೊಲೆ ಯಾದ ವ್ಯಕ್ತಿಯಾಗಿದ್ದು ಇವರ ಅಣ್ಣ ಪ್ರಕಾಶ ಕೊಟೂರ ಕೊಲೆ ಮಾಡಿದ್ದಾನೆ ‌

ಪದೇ ಪದೇ ಕ್ಷುಲ್ಲಕ ಕಾರಣಕ್ಕಾಗಿ ಆಕಾಶ ಗಲಾಟೆ ಮಾಡುತ್ತಿದ್ದನಂತೆ.ಇವತ್ತು ಮತ್ತೆ ಕುಡಿದು ಬಂದು ಗಲಾಟೆ ಆರಂಭ ಮಾಡಿದ್ದನಂತೆ ಬೇಸತ್ತು ಇವರ ಸಹೋದರ ಪ್ರಕಾಶ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.

ಧಾರವಾಡದ ಮುರುಘಮಠದ ಡಿಪೋ ಸರ್ಕಲ್ ಬಳಿ ಘಟನೆ ಘಟನೆ ನಡೆದಿದೆ‌.ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಇನ್ನೂ ವಿಷಯ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.