ಊರಿನಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾದ ಸಿದ್ದರಾಮಯ್ಯ

Suddi Sante Desk

ಮೈಸೂರು –

ಅಯೋಧ್ಯೆ ರಾಮ ಮಂದಿರ ದೇಣಿಗೆಯ ಬಗ್ಗೆ ಏನೇನೂ ಮಾತನಾಡಿ ಲೆಕ್ಕ ಕೇಳಿದ್ದ ಮಾಜಿ ಮುಖ್ಯಮಂತ್ರಿ ಈಗ ತಮ್ಮ ಊರಲ್ಲೇ ರಾಮ ಮಂದಿರ ಕಟ್ಟಲು ಹೊರಟಿದ್ದಾರೆ.ಹೌದು ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಎಲ್ಲಾ ಊರಿನಲ್ಲೂ ರಾಮ ಮಂದಿರ ಕಟ್ಟುತ್ತಾರೆ. ನಮ್ಮ ಊರಿನಲ್ಲಿ ಕೂಡ ರಾಮ ಮಂದಿರ ಕಟ್ಟುತ್ತೇನೆ.ಇದಕ್ಕೆ ಊರಿನವರೂ ಕೂಡ ದೇಣಿಗೆ ಕೊಟ್ಟಿದ್ದಾರೆ ‘ ಎಂದರು.

ಅಯೋಧ್ಯೆ ರಾಮ ಮಂದಿರ ದೇಣಿಗೆ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ತಪ್ಪೇನಿದೆ ? 1000 ಕೋಟಿ ಕಲೆಕ್ಷನ್ ಆಯಿತು ಅಂದರೆ ಲೆಕ್ಕ ಕೊಡಿ.ಹಿಂದಿನ ಸಲದ ಹಣದ ಲೆಕ್ಕ ಕೊಟ್ಟಿಲ್ಲ. ದುಡ್ಡು ಕೊಟ್ಟವರೇ ಲೆಕ್ಕ ಕೇಳಬೇಕೆಂದೇನಿಲ್ಲ ‘ ಎಂದರು.ಒಟ್ಟಾರೆ ಏನೇ ಆಗಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಕೇಳಿದ ವಿಚಾರದಲ್ಲಿ ಏನೇನೂ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ಊರಿನಲ್ಲಿಯೇ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.