72 ನೇ ಗಣರಾಜ್ಯೋತ್ಸವವನ್ನು ಧಾರವಾಡದ ಬಸವರಡ್ಡಿ ಶಿಕ್ಷಣ ಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇತ್ತ ನಗರದ SDM ಇಂಜನೀಯರಿಂಗ್ ಕಾಲೇಜಿನಲ್ಲೂ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ ಕೆ ಗೋಪಿನಾಥ್ ,ಪ್ರೊ. ವಿಜಯ ಶಿವಣ್ಣವರ, ಪ್ರೊ ವಿ ಕೆ ಪರ್ವತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದರೊಂದಿಗೆ ನಗರದ ಗ್ಲೋಬಲ್ ಬಿಜಿನೆಸ್ ಶಾಲೆ ಯಲ್ಲೂ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇದರೊಂದಿಗೆ ನಗರದ ತುಂಬೆಲ್ಲಾ 72 ನೇ ಗಣರಾಜ್ಯೋತ್ಸವದ ಆಚರಣೆ ಸಡಗರ ಸಂಭ್ರಮದಿಂದ ಕಂಡು ಬಂದಿತು.