ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ರಾಮರಾಜನ್ ಅಧಿಕಾರ ಸ್ವೀಕಾರ ಮಾಡಿದ್ರು.ಹುಬ್ಬಳ್ಳಿಯ ನವನಗರದಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವೀಕಾರ ಮಾಡಿಕೊಂಡ್ರು.ಪಿ ಕೃಷ್ಣಕಾಂತ ಅವರನ್ನು ಧಾರವಾಡ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಿದ ನಂತರವೂ ಅವರಿಗೆ ಈ ಒಂದು ಡಿಸಿಪಿ ಹುದ್ದೆಯನ್ನು ಪ್ರಭಾರಿಯನ್ನಾಗಿ ಹೆಚ್ಚುವರಿಯಾಗಿ ನೀಡಲಾಗಿತ್ತು. ಸಧ್ಯ ಈ ಜಾಗಕ್ಕೇ ರಾಮರಾಜನ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದ್ದು ಇಂದು ಕಚೇರಿಯಲ್ಲಿ ಸರಳವಾಗಿ ಯಾವುದೇ ಆಡಂಬರವಿಲ್ಲದೇ ಅಧಿಕಾರ ಸ್ವೀಕಾರ ಮಾಡಿಕೊಂಡ್ರು.
ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಎಲ್ಲಾ ಪೊಲೀಸ್ ಠಾಣೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಇನಸ್ಪೇಕ್ಟರ್ ಗಳು ಸೇರಿದಂತೆ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.ಇನ್ನೂ 2017 ರ ಐಪಿಎಸ್ ಆಗಿರುವ ಕೆ.ರಾಮರಾಜನ್, ಅಧಿಕಾರ ಸ್ವೀಕಾರದ ಸಮಯದಲ್ಲಿ ಯಾರಿಂದಲೂ ಪುಷ್ಪಗುಚ್ಚವನ್ನ ಪಡೆಯದೇ ಮೊದಲ ದಿನವೇ ಸರಳ ವ್ಯಕ್ತಿಯೊಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಪ್ರಭಾರದಲ್ಲಿದ್ದ ಹುದ್ದೆಗೆ ಚೆನ್ನಪಟ್ಟಣದಲ್ಲಿ ಎಸಿಪಿಯಾಗಿದ್ದ ಇವರನ್ನ ಅನ್ಯ ಕಾರ್ಯದ ನಿಮಿತ್ತ (ಓಓಡಿ) ಆಧಾರದ ಮೇಲೆ ನಗರಕ್ಕೆ ವರ್ಗಾವಣೆ ಮಾಡಿ, ರಾಜ್ಯ ಸರಕಾರ ನಿನ್ನೆಯಷ್ಟೇ ಆದೇಶ ಮಾಡಿತ್ತು.ಕಲಬುರಗಿಯಲ್ಲಿ ತರಬೇತಿ ಮುಗಿಸಿರುವ ತಮಿಳುನಾಡು ಮೂಲದ ಕೆ.ರಾಮರಾಜನ್ ಕಿರಿಯ ವಯಸ್ಸಿನ ಅಧಿಕಾರಿಯಾಗಿದ್ದಾರೆ.ಇನ್ನೂ ಅಧಿಕಾರ ಸ್ವೀಕಾರದ ನಂತರ ನೂತನ ಡಿಸಿಪಿ ಸಾಹೇಬ್ರು ಅವಳಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳ ಪರಿಚಯವನ್ನು ಮಾಡಿಕೊಂಡು ಮೊದಲನೇಯ ದಿನ ಸಭೆ ಮಾಡಿ ಕೆಲ ಮಾಹಿತಿಯನ್ನು ಪಡೆದುಕೊಂಡು ಎಲ್ಲರೂ ಜೊತೆಯಾಗಿ ಸರಿಯಾಗಿ ಕೆಲಸ ಮಾಡಿಕೊಂಡು ಹೊಗೋಣ ಎಂದು ಹೇಳಿದ್ರು.