ಕ.ರಾ.ಪ್ರಾ.ಶಿ.ಸಂಘದ ಸದಸ್ಯತ್ವ ರೂ.200/-ರ ಬಗ್ಗೆ ಅಸಮ್ಮತಿಸಿದ ಅಶೋಕ.ಸಜ್ಜನ…..

Suddi Sante Desk

ಹುಬ್ಬಳ್ಳಿ –

ನಾನು ಈಗಾಗಲೇ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ಸದಸ್ಯತ್ವವನ್ನು ರೂ.ಹತ್ತು ಸದಸ್ಯತ್ವ ಶುಲ್ಕದೊಂದಿಗೆ ಹೊಂದಿ ರಾಜ್ಯಾಧ್ಯಕ್ಷನಾಗಿದ್ದೇನೆ.

ಹೀಗಿರುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಬೆಂಗಳೂರ ಇದರ ವಾರ್ಷಿಕ ಸದಸ್ಯತ್ವ ಶುಲ್ಕ ರೂ.ಎರಡನೂರನ್ನು ನನ್ನ ವೇತನದಲ್ಲಿ ಕಟಾವಣೆ ಮಾಡಬಾರದೆಂದು ಅಸ ಮ್ಮತಿ ಪತ್ರವನ್ನು ನಮ್ಮ ವಲಯ ಹುಬ್ಬಳ್ಳಿ ಗ್ರಾಮೀ ಣ ವಲಯದ ವೇತನ ಸೆಳೆಯುವ ಅಧಿಕಾರಿಗಳಾ ಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಬಂಧಿಸಿದ ವಿಳಾಸಕ್ಕೆ ಪತ್ರ ತಲುಪಿಸಿ ಕೋರಿಕೊಂಡಿದ್ದೇನೆ.

ಈ ದಿಸೆಯಲ್ಲಿ ನಮ್ಮ ಕ.ಸ.ಗ್ರಾ.ಪ್ರಾ.ಶಾ.ಶಿ.ಸಂಘದ ಸರ್ವ ಸದಸ್ಯರುಗಳು ರಾಜ್ಯಾದ್ಯಂತ ತಮ್ಮ ತಮ್ಮ ಬಿ.ಇ.ಓ.ರವರಿಗೆ ವೈಯಕ್ತಿವಾಗಿ ಲಿಖಿತ ಅಸಮ್ಮತಿ ಪತ್ರ ಸಲ್ಲಿಸಲು ನನ್ನ ವೈಯಕ್ತಿಕ ವಿನಯ ವಿನಂತಿ ಯಾಗಿರುತ್ತದೆ.

ಸಂಘ ಸ್ವಾತಂತ್ರ್ಯ ಚಿರಾಯುವಾಗಿರುತ್ತದೆ ಸಂಘಟಕರು ಯಾರ ಮನೆಯ ಆಸ್ತಿಯೂ ಅಲ್ಲ ಎಂದು ಪತ್ರಿಕಾ ಹೇಳಿಕೆಯ ಮೂಲಕ ಅಶೋಕ. ಎಮ್.ಸಜ್ಜನ.ಪ್ರಕಟಣೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.