ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ NH ಕೋನರೆಡ್ಡಿ – ಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ದಿ ಪರ್ವ…..

Suddi Sante Desk
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ NH ಕೋನರೆಡ್ಡಿ  – ಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ದಿ ಪರ್ವ…..

ನವಲಗುಂದ

ವಿವಿಧ ಕಾಮಗಾರಿಗಳಿಗೆ ಕೋನರಡ್ಡಿ ಚಾಲನೆ, ₹2.50 ಕೋಟಿ ಅನುದಾನ ಹೌದು ಮೊರಬ ಗ್ರಾಮದ ದೇವಸ್ಥಾನ ಹಾಗೂ ರಸ್ತೆ ಅಭಿವೃದ್ಧಿಗೆ ₹2.50 ಕೋಟಿ ಅನುದಾನ ಬಿಡುಗಡೆ ಮಾಡ ಲಾಗಿದೆಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು ಮೊರಬ ಗ್ರಾಮದಲ್ಲಿ ದೇವಸ್ಥಾನಗಳು ಹಾಗೂ ಸಿ.ಸಿ ರಸ್ತೆ ಕಾಮ ಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮದ ಪ್ರಮುಖ ದೇವಸ್ಥಾನಗಳಾದ ಯೋಗಿಶ್ವರ ದೇವಸ್ಥಾನಕ್ಕೆ ₹40ಲಕ್ಷ, ವೆಂಕಟೇಶ್ವರ ದೇವಸ್ಥಾನಕ್ಕೆ ₹20 ಲಕ್ಷ, ಅಲ್ಪ ಸಂಖ್ಯಾತರ ಸಮಾಜದ ಹಿರೇಮಸೂತಿಗೆ ₹20 ಲಕ್ಷ, ಮಹಾ ಲಿಂಗರಾಯ ದೇವಸ್ಥಾನಕ್ಕೆ ₹5 ಲಕ್ಷ, ವಿಠ್ಠಲ ದೇವಸ್ಥಾನಕ್ಕೆ ₹5 ಲಕ್ಷ, ಡಾ.ಅಂಬೇಡ್ಕರ್‌ ನಗರದಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ₹15 ಲಕ್ಷ, ಗ್ರಾಮದ ಬಸ್‌ ನಿಲ್ದಾಣ ಹಿಂದುಗಡೆ ಇರುವ ಚಕ್ರವರ್ತಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಜಿಮ್‌ ಪ್ರಾರಂಭಿಸಲು ₹25 ಲಕ್ಷ,

ನೂತನ ನಾಡಕಚೇರಿಯ ಕಟ್ಟಡ ನಿರ್ಮಿಸಲು ₹15 ಲಕ್ಷ, ಸರ್ಕಾರಿ ಪಿ.ಯು ಕಾಲೇಜಿಗೆ ₹13 ಲಕ್ಷ, ರೈತರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ₹5 ಲಕ್ಷ, ಹಂಚಿನಾಳಾವರ ಪ್ಲಾಟ್‌ ತನಕ ರಸ್ತೆಗೆ ₹50 ಲಕ್ಷ, ಶಿರಕೋಳ ರಸ್ತೆಯಿಂದ ಬಡೆಮಿಯ್ಯಾ ಅವರ ಮನೆಯವರೆಗೆ ರಸ್ತೆ ಕಾಮಗಾರಿಗೆ ₹50 ಲಕ್ಷ ಸೇರಿ ಒಟ್ಟು 2.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದರು

ಮೊರಬ ಗ್ರಾಮದ ಚಕ್ಕಡಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಪ್ರಗತಿಯಲ್ಲಿದ್ದು ₹4.76 ಕೋಟಿ ವೆಚ್ಚದಲ್ಲಿ ಮೊರಬ-ಅಮ್ಮಿನ ಬಾವಿ ರಸ್ತೆ ಡಾಂಬರಿಕರಣ ಮಾಡಲು ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದರು.ಮೊರಬ ಗ್ರಾಮದ ಜಡೀಮಠದ ಮಹೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಮಲಪ್ರಭಾ ನೀರು ಬಳಕೆ ದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಮಾಲತೇಶ ಹಂಚಿನಾಳ, ಮುರಗಯ್ಯನವರು ವಿರಕ್ತಮಠ, ಎಂ.ಎಸ್. ರೋಣದ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.