ಹುಬ್ಬಳ್ಳಿ –
ಅಕ್ರಮ ಲೇಔಟ್ ಗಳಿಗೆ ಬ್ರೇಕ್ ಹಾಕಿದ HUDA – ಅಧ್ಯಕ್ಷ ಶಾಕೀರ ಸನದಿ ನೇತ್ರತ್ವದಲ್ಲಿ ಕಾರ್ಯಾಚರಣೆ ಅಕ್ರಮ ಲೇಔಟ್ ಗಳ ನಿರ್ಮಾಣಕ್ಕೆ ಕಡಿವಾಣ ಕಟ್ಟುನಿಟ್ಟಿನ ಕ್ರಮ…..
ಅಕ್ರಮವಾಗಿ ಲೇಔಟ್ ಗಳನ್ನು ನಿರ್ಮಾಣ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು ಸೂಚನೆಯ ನಡುವೆ ಕಾನೂನು ಬಾಹಿರವಾಗಿ ಲೇಔಟ್ ಗಳನ್ನು ನಿರ್ಮಾಣ ಮಾಡುತ್ತಿದ್ದವರಿಗೆ ಹುಬ್ಬಳ್ಳಿಯಲ್ಲಿ ಬಿಸಿ ಮುಟ್ಟಿಸಲಾಗಿದೆ ಹೌದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆ ಯುತ್ತಿದ್ದ ಅಕ್ರಮ ಬಡಾವಣೆಯ ನಿರ್ಮಾಣಕ್ಕೆ ಪ್ರಾಧಿಕಾರ ದವರು ಕಡಿವಾಣ ಹಾಕಿ ಬಿಸಿ ಮುಟ್ಟಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಯಲ್ಲಿನ ಹುಬ್ಬಳ್ಳಿ ಗ್ರಾಮೀಣ ಭಾಗದ ಗಬ್ಬೂರ ಮತ್ತು ಅ.ತಿಮ್ಮಸಾಗರ ದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಿವಿಧ ಅಕ್ರಮ ಲೇಔಟ್ ಗಳ ಮೇಲೆ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿ ತೆರುವು ಮಾಡ ಲಾಯಿತು.ಇದೇ ವೇಳೆ ಪ್ರಾಧಿಕಾರದಿಂದ ಕಟ್ಟುನಿಟಿನ ಕ್ರಮ ಕೈಗೊಂಡು ತೆರುವನ್ನು ಮಾಡಲಾಯಿತು.ಈ ಒಂದು ಸಂದರ್ಭ ದಲ್ಲಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಫಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..



