ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ…..

Suddi Sante Desk

ಚಿತ್ರದುರ್ಗ –

ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು‌. ಚಿತ್ರದುರ್ಗ ದಲ್ಲಿ ಮಾತನಾಡಿದ ಅವರು ಈಗ ಜನರ ಆರೋಗ್ಯದ ರಕ್ಷಣೆಯೇ ನಮ್ಮ ಆದ್ಯತೆ ಇದೆ ಎಂದರು

ನಮ್ಮ ಪಕ್ಷದಲ್ಲಿ ಈ ರೀತಿ ಮಾತನಾಡಿ ಸುದ್ದಿ ಬಿಡುವವರಿಗೆ ಕಟ್ಟನಿಟ್ಟಾಗಿ ಹೇಳ್ತಿನಿ ಬಿಜೆಪಿ ರಾಷ್ಟ್ರೀಯ ನಾಯಕತ್ವದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲವೆಂದರು.ಸಿಎಂ ಕೆಲಸ ಮಾಡಲು ಯಾರೂ ಡಿಸ್ಟರ್ಬ್ ಮಾಡಬಾರದೆಂದರು.

ಪೆಟ್ರೊಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭ ಟನೆ ವಿಚಾರ ಕುರಿತು ಮಾತನಾಡಿದ ಅವರು ಕಾಂಗ್ರೇಸ್ ನವರಿಗೆ ಕೆಲಸವೇನಿದೆ ಪ್ರತಿಭಟನೆ ಮಾಡಲಿ ಎಂದು ವ್ಯಂಗ್ಯವಾಡಿದರು.ಅವರಿಗೆ ಬರೀ ಅಧಿಕಾರ,ದುಡ್ಡು, ಭ್ರಷ್ಟಾಚಾರ ಮಾಡಿ ಮಾಡಿ ರೂಢಿಯಾಗಿದೆ.ಬಿಜೆಪಿ ಕೇಂದ್ರ,ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದೆ.10-12 ದಿನದೊಳಗೆ ಹತ್ತುಪಟ್ಟು ಆಕ್ಸಿಜನ್ ಜಾಸ್ತಿ ಆಗಿದೆ.900 ಮೆಟ್ರಿಕ್ ಟನ್ ಇದ್ದ ಆಕ್ಸಿಜನ್ 9 ಸಾವಿರ ಮೆಟ್ರಿಕ್ ಟನ್ ಆಗಿದೆ.ಎಲ್ಲಾಕಡೆಗೆ ಟ್ರೇನ್, ಪ್ಲೈಟ್ ಗಳ ಮೂಲಕ ಆಕ್ಸಿಜನ್ ಕಳುಹಿಸಿದೇವೆ.ಪ್ತಪಂಚದ ಅನೇಕ ದೇಶಗಳಲ್ಲಿ ಅಮೇರಿಕ ಗೆ ಹೋಲಿಸಿದ್ರೆ ನಮ್ಮ ದೇಶದ ಸ್ಥಿತಿ ಚನ್ನಾಗಿದೆ.ಹಾನಿ, ಸಾವನ್ನಪ್ಪಿರೋ ಜನರ ನೋವನ್ನ ನಾನು ಅರ್ಥ ಮಾಡಿಕೊಂಡಿದ್ದೇನೆ.

ಕೈ ಮೀರಿದ ಈ ಸ್ಥಿತಿಯಲ್ಲಿ ಕೇಂದ್ರ‌ ರಾಜ್ಯ ಅತ್ಯು ತ್ತಮ ನಿರ್ವಹಣೆ ಮಾಡಿವೆ.ಮೋದಿಯವರು ತಿಗಣೆ ಇದ್ದಂತೆ ಜನರ ರಕ್ತ ಈರುತ್ತಿದ್ದಾರೆ ಎಂಬ ಸಿದ್ದರಾಮ ಯ್ಯ ಹೇಳಿಕೆ ವಿಚಾರ.ಸಿದ್ದರಾಮಯ್ಯ, ಕಾಂಗ್ರೇಸ್ ಪಕ್ಷವನ್ನ ಜನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ. ರಾಜಸ್ಥಾನ,ಮಹಾರಾಷ್ಟ್ರದಲ್ಲಿ ಏನಾಗಿದೆ ಎಂದು ಕಾಂಗ್ರೇಸ್ ನವರು ನೋಡಲಿ.ಅಧಿಕೃತ ವಿರೋಧ ಪಕ್ಷವಾಗಿಯೂ ಹೊರ ಹೊಮ್ಮಲು ಸಾಧ್ಯವಾಗಿಲ್ಲ. ಎಲ್ಲಾಕಡೆ ನಡೆದ ಚುನಾವಣೆಗಳಲ್ಲಿ ಇವರನ್ನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆಂದರು.ಸಿದ್ದರಾಮ ಯ್ಯ, ರಾಹುಲ್ ಗಾಂಧಿ ತಿಗಣೆಯೋ,ಮತ್ತೊಂದೊ ಜನಕ್ಕೆ ಗೊತ್ತಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.