ಶಿಕ್ಷಣ ಇಲಾಖೆಯ ಭ್ರಷ್ಟಾಚಾರ ಹೇಗಿದೆ ನೋಡಿ – ದಾಖಲೆ ಸಮೇತವಾಗಿ ಇಲಾಖೆಯ ಆಟವನ್ನು ಬಿಚ್ಚಿಡುತ್ತಿದೆ ನಿಮ್ಮ ಸುದ್ದಿ ಸಂತೆ…..

Suddi Sante Desk

ವಿಜಯಪುರ –

ಹೌದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದರೂ ಕೂಡಾ ಶಿಕ್ಷಕರಿಗೆ ಕೈತುಂಬಾ ಸಂಬಳ ನೀಡಿದ ಬೆನ್ನಲ್ಲೇ ಈಗ ಮತ್ತೆ ಇಂಥಹದೊಂದು ಪ್ರಕರಣವೊಂದು ಬೆಳಕಿಗೆ ಬಂದಿದೆ.ಇದರೊದಿಂಗೆ ಶಿಕ್ಷಣ ಇಲಾಖೆಯ ಬ್ರಹ್ಮಾಂ ಡ ಬ್ರಷ್ಟಾಚಾರವೊಂದು ಬಟಾ ಬಯಲಾಗಿದೆ.

ಹೌದು ಇಲ್ಲಿ ಕರ್ತವ್ಯಕ್ಕೆ ಗೈರಾದರೂ ಅಮಾನತ್ತಾ ದರೂ, ನಿವೃತ್ತಿಯಾದರೂ ಬರುತ್ತೆ ಕೈ ತುಂಬಾ ಸಂಪೂರ್ಣ ಸಂಬಳ.ವಿಜಯಪುರ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬಟಾ ಬಯಲಾಗಿದೆ.

ನಿವೃತ್ತಿಯಾಗಿ ಮೂರು ತಿಂಗಳಾಗಿದ್ದರು ಕೂಡಾ ಸಂಬಳವನ್ನು ಪಡೆದಿದ್ದಾರೆ ಮುಖ್ಯ ಗುರುಗಳೊ ಬ್ಬರು.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಬಿಜೂರು ಶಾಲೆಯ ಶಿಕ್ಷಕರ ಅವಾಂತರ ಬೆಳಕಿಗ ಬಂದಿದೆ.ಟಿ ಎಸ್ ಸಾತಿಹಾಳ ಎಂಬ ಶಿಕ್ಷಕ ನಿವೃತ್ತಿಯಾದರೂ ಮೂರು ತಿಂಗಳಾಗಿದೆ.ಮೂರು ತಿಂಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಸಂಬಳ ವನ್ನು ಪಡೆದಿದ್ದಾರೆ ಇವರು.ಯಾರಾದರೂ ಶಿಕ್ಷಕರು ತಪ್ಪು ಮಾಡಿದರೆ ಅವರ ಮೇಲೆ ವರದಿಯನ್ನು ಕಳಿಸುವ ಅಧಿಕಾರಿಗಳಿಗೆ ಈ ಮುಖ್ಯ ಶಿಕ್ಷಕ ನಿವೃತ್ತಿ ಯಾಗಿದ್ದು ಗೊತ್ತಾಗಲಿಲ್ಲ ಎಂಬ ವಿಚಾರ ಈಗ ಮೇಲಾಧಿಕಾರಿಗಳಿಗೆ ಕಾಡುತ್ತಿದೆ

ಇದರ ಹಿಂದೆ ಯಾರು ಇದ್ದಾರೆ ನಿವೃತ್ತಿಯಾದರೂ ಹೇಗೆ ಇವರ ಸಂಬಳವನ್ನು ಮಾಡಿದ್ದು ಸಂಬಳ ಮಾಡಿದ್ದು ಯಾರು ಈ ಎಲ್ಲಾ ವಿಚಾರ ಕುರಿತಂತೆ ಸಧ್ಯ ದಾಖಲೆ ಸಮೇತವಾಗಿ ವರದಿಯನ್ನು ಸುದ್ದಿ ಸಂತೆ ಪ್ರಸಾರವನ್ನು ಮಾಡಿದ್ದು ಇನ್ನೂ ಇದೇ ರೀತಿ ಯಲ್ಲಿ ಇನ್ನೂ ಕೆಲವು ಅವಘಡಗಳಿದ್ದು ಅವುಗ ಳನ್ನು ದಾಖಲೆಗಳನ್ನು ಸುದ್ದಿ ಸಂತೆ ಟೀಮ್ ಕಲೆ ಹಾಕುತ್ತಿದ್ದು ಬಟಾ ಬಯಲು ಮಾಡಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.