This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

WhatsApp Group Join Now
Telegram Group Join Now

ಧಾರವಾಡ –

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಸಹಯೋಗದಲ್ಲಿ ಧಾರವಾಡ ಪ್ರಾದೇಶಿಕ ಕೇಂದ್ರದ ವತಿಯಿಂದ ಸಿಡಾಕ್ ತರಬೇತಿ ಕೇಂದ್ರದಲ್ಲಿ ಮೂರು ದಿನಗಳ ತರಬೇತುದಾರರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ ವಿಭಾಗದ ನೂತನವಾಗಿ ಆಯ್ಕೆ ಯಾದ ಗ್ರಾಮ ಪಂಚಾಯಿತಿ ಸದಸ್ಯರ ಸಾಮಥ್ರ್ಯಾಭಿವೃದ್ಧಿಗಾಗಿ ತರಬೇತುದಾರರ ತರಬೇತಿಯನ್ನು ಇಂದಿನಿಂದ 13ನೇ ಫೆಬ್ರುವರಿ 2021ರವರೆಗೆ ಆಯೋಜಿಸಲಾಗಿದೆ. ಸದರಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ರವರು ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶಿಲ್ಪಾ ನಾಗ್ (ಐ.ಎ.ಎಸ್) ರವರ ಮುಂದಾಳತ್ವದಲ್ಲಿ ರೂಪಿಸಲಾದ 05 ದಿನಗಳ ತರಬೇತಿ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಆಯೋಜಿಸುವ ನಿಟ್ಟಿನಲ್ಲಿ ಅ.ನ.ಸಾ.ರಾ.ಗ್ರಾ ಮತ್ತು ಪಂ.ರಾ ಸಂಸ್ಥೆ ಪ್ರಾದೇಶಿಕ ಕೇಂದ್ರ ಧಾರವಾಡದಲ್ಲಿ 03 ದಿನಗಳ ತರಬೇತುದಾರರ ತರಬೇತಿಯನ್ನು ಆಯೋಜಿಸಲಾಗಿದೆ.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಯ ಧಾರವಾಡ ಪ್ರಾದೇಶಿಕ ಕೇಂದ್ರವು ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸಿಡಾಕ್ ಕೇಂದ್ರದಲ್ಲಿ ಏರ್ಪಡಿಸಿದ್ದ ನೂತನ ಗ್ರಾಮ ಪಂಚಾಯಿತಿ ಸದಸ್ಯರ ತರಬೇತಿಗಾಗಿ ಮೂರು ದಿನಗಳ ತರಬೇತುದಾರರ ತರಬೇತಿಯ ಎರಡನೇ ಆವೃತ್ತಿಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಸಿಡಾಕ್ ನಿರ್ದೇಶಕರು ಹಾಗೂ ಧಾರವಾಡ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಅಪರ ನಿರ್ದೇಶಕರಾದ ವೀರಣ್ಣ ಎಸ್. ಹವಾಲ್ದಾರ್ ರವರು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಅವರು ತರಬೇತಿಗಳು ಗ್ರಾಮೀಣಾಭಿವೃದ್ಧಿಯಲ್ಲಿ ಧನಾತ್ಮಕ ಬದಲಾವಣೆ ತರುವಂತಾಗಲಿ, ಗ್ರಾಮ ಸರ್ಕಾರದ ಆಡಳಿತ ನಡೆಸಲು ಜನರಿಂದ ಚುನಾಯಿತರಾಗಿ ಬಂದಿರುವ ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಹೇಳುವವರಾಗಿರುವಾಗ ಸಮಾಜ ಅವರ ನಡೆ-ನುಡಿಗಳನ್ನು ಸೂಕ್ಷ್ಮತೆಯಿಂದ ಗಮನಿಸುತ್ತಿರುತ್ತಾರೆ. ಗ್ರಾಮ ಪಂಚಾಯಿತಿಯ ಆಡಳಿತ ನಿರ್ವಹಣೆಯಲ್ಲಿ ಪ್ರಾಮಾಣಿಕತೆ, ಬದ್ಧತೆ, ನೈತಿಕ ಮೌಲ್ಯಗಳನ್ನು ಸದಸ್ಯರು ಹೊಂದುವ ನಿಟ್ಟಿನಲ್ಲಿ ತರಬೇತಿಗಳು ಸಹಕಾರಿಯಾಗಬೇಕು. 850ನೇ ವರ್ಷಗಳ ಹಿಂದೆಯೇ ಬಸವಾದಿ ಶರಣರ ಅನುಭವ ಮಂಟಪದ ನಮಗೆ ದೊಡ್ಡ ಜ್ಞಾನ ನೀಡಿದೆ. ನಮ್ಮ ನಾಡಿನ ಘನತೆ, ವೈಭವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ಸಾಕಾರಗೊಳಿಸಲು ಸದಸ್ಯರನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ, ಅ.ನ.ಸಾ.ರಾ.ಗ್ರಾ ಮತ್ತು ಪಂ.ರಾ ಸಂಸ್ಥೆ, ಪ್ರಾದೇಶಿಕ ಕೇಂದ್ರ ಧಾರವಾಡದ ಉಪ ನಿರ್ದೇಶಕರಾದ ಕು. ಪವಿತ್ರ ಪಾಟೀಲ್ ರವರು ಮಾತನಾಡಿ, ತರಬೇತುದಾರರು ತರಬೇತಿಯನ್ನು ಒಂದು ಕೆಲಸ ಎಂದು ಭಾವಿಸದೇ ಅದನ್ನು ಮೀರಿದ ಬದ್ಧತೆ, ವಿಶ್ವಾಸದಿಂದ ಸರಿಯಾದ ಮಾಹಿತಿಗಳನ್ನು ಸದಸ್ಯರಿಗೆ ನೀಡುವ ಮೂಲಕ ತರಬೇತಿಯ ಆಶಯಗಳನ್ನು ಗಟ್ಟಿಗೊಳಿಸಿ, ಜನಪ್ರತಿನಿಧಿಗಳು ಉತ್ತಮ ಜನಪರ ಕಾರ್ಯಗಳನ್ನು ಮಾಡಲು ಪ್ರೇರೇಪಿಸಬೇಕು. ತರಬೇತಿಗಳನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ, ಮಾದರಿ ಗ್ರಾಮಗಳ ಸೃಜನೆಗೆ ನಾಂದಿ ಹಾಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಹಣಕಾಸು ವಿಷಯದ ಬೋಧಕರಾದ ಪರ್ವೇಜ್ ಖಾನ್ ರವರು, ತರಬೇತಿಯ ಯಶಸ್ಸು, ಗ್ರಾಮೀಣಾಭಿವೃದ್ಧಿಯಲ್ಲಿನ ಧನಾತ್ಮಕ ಬದಲಾವಣೆಯಲ್ಲಿ ಅಡಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಗೆ ತರಬೇತಿಯ ಉಸ್ತುವಾರಿ ಅಧಿಕಾರಿಯಾದ ಸಿ. ವಿಜಯಕುಮಾರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಎಸ್.ಐ.ಆರ್.ಡಿ. ಮೈಸೂರು ಅಂತರ್ಜಲ ಬೋಧಕರಾದ ಡಾ. ಪ್ರಮೋದ ಮೋಹನ ಚಾಂದಕವಟೆಯವರು ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತುದಾರರ ತರಬೇತಿಯಲ್ಲಿ ಧಾರವಾಡ, ಹಾವೇರಿ ಮತ್ತು ವಿಜಯಪುರದಿಂದ 77 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪ್ರಾದೇಶಿಕ ಕೇಂದ್ರದ ಲತಾ ಕುಲಕರ್ಣಿ,ಶ್ರೀಮತಿ ದ್ರಾಕ್ಷಾಯಿಣಿ, ಸವಿತಾ ಕಾರ್ಯಕ್ರಮದ ವ್ಯವಸ್ಥೆಗಳನ್ನು ಸಂಘಟಿಸಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk